38 ವರ್ಷಗಳ ಬಳಿಕ ಉಡುಪಿಯಲ್ಲಿ ದಾಖಲೆ ಮಳೆ; ಕೃಷ್ಣ ಮಠಕ್ಕೂ ನುಗ್ಗಿದೆ ನೀರು

ಕೃಷ್ಣಾನಗರಿ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. 38 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಾಮಳೆಯಾಗುತ್ತಿದೆ. ಉಡುಪಿಯೊಂದರಲ್ಲೇ 315 ಮಿಮಿ ಮಳೆಯಾಗಿದೆ. ಇಡೀ ನಗರ ಜಲಾವೃತವಾಗಿದ್ದು, ಜನರು ಹೊರಗೆ ಬರಲು ಪರದಾಡುವಂತಾಗಿದೆ. 
 

First Published Sep 21, 2020, 11:29 AM IST | Last Updated Sep 21, 2020, 11:29 AM IST

ಉಡುಪಿ (ಸೆ. 21): ಕೃಷ್ಣಾನಗರಿ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. 38 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಾಮಳೆಯಾಗುತ್ತಿದೆ. ಉಡುಪಿಯೊಂದರಲ್ಲೇ 315 ಮಿಮಿ ಮಳೆಯಾಗಿದೆ. ಇಡೀ ನಗರ ಜಲಾವೃತವಾಗಿದ್ದು, ಜನರು ಹೊರಗೆ ಬರಲು ಪರದಾಡುವಂತಾಗಿದೆ. 

ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ, ಮಲೆನಾಡು ಭಾಗಗಳಲ್ಲಿ ರೆಡ್ ಅಲರ್ಟ್..!

ಕೃಷ್ಣ ಮಠ ಸುತ್ತಮುತ್ತ ಸಂಪೂರ್ಣ ಜಲಾವೃತವಾಗಿದೆ. ಗೋಶಾಲೆ ಸಂಪೂರ್ಣ ಜಲಾವೃತವಾಗಿದೆ. ಎಲ್ಲಿ ನೋಡಿದರೂ ನೀರು.. ನೀರು... ಉಡುಪಿಯ ಜನ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಬಹುತೇಕರು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಹೇಗಾಗಿದೆ ಕೃಷ್ಣಾ ನಗರಿ? ಕೃಷ್ಣ ಮಠದ ಸುತ್ತ ನೀರು ಹೇಗೆ ಆವೃತವಾಗಿದೆ? ನಮ್ಮ ಪ್ರತಿನಿಧಿ ಸ್ಥಳದಿಂದ ವರದಿ ನೀಡಿದ್ದಾರೆ. ನೋಡೋಣ ಬನ್ನಿ..!