ಅತ್ತ ಮಳೆ ಇಲ್ಲ..ಇತ್ತ ಕಾಲುವೆ ನೀರು ಬಂದಿಲ್ಲ: ನೀರಿಲ್ಲದೆ ಕುರಿ, ಟ್ರ್ಯಾಕ್ಟರ್ ಬಿಟ್ಟು ಬೆಳೆನಾಶ !
ಆ ರೈತರು ಪ್ರತಿವರ್ಷದಂತೆ ಮಳೆ ಬರುತ್ತೆ, ಕಾಲುವೆ ನೀರು ಸಿಗುತ್ತೆ ಅಂತ ಭಾವಿಸಿ ಭತ್ತ ನಾಟಿ ಮಾಡಿದ್ರು. ಸಮಯಕ್ಕೆ ಸರಿಯಾಗಿ ಭತ್ತಕ್ಕೆ ಗೊಬ್ಬರ ಸಹ ಹಾಕಿದ್ರು. ಇನ್ನೇನು ಭತ್ತ ಕಾಯಿ ಕಟ್ಟುತ್ತೆ ಎನ್ನುವಷ್ಟರಲ್ಲಿಯೇ ಬೆಳೆ ಒಣಗಿ ಕೈ ತಪ್ತಿದೆ.. ಏಕೆ ಅಂತೀರಾ ಈ ವರದಿ ನೋಡಿ.
ಬಿಸಿಲನಾಡು ರಾಯಚೂರಲ್ಲಿ(Raichur) ಬರ ತಾಂಡವವಾಡ್ತಿದೆ. ಮುಂಗಾರು ಮಳೆ(Rain) ಕೈ ಕೊಟ್ಟಿದೆ, ಜುಲೈನಲ್ಲಿ ಸುರಿದ ಅಲ್ಪ ಮಳೆ ನಂಬಿ ಬೆಳೆ ಹಾಕಿದ ರೈತ ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಸಾಲ ಸೋಲ ಮಾಡಿ ಬೆಳೆದ(Crops) ಬೆಳೆ ಗದ್ದೆಯಲ್ಲೇ ಒಣಗ್ತಿದೆ. ಈ ವರ್ಷ ಕಾಲುವೆ ನೀರು ಸಹ ಬರದೇ ರೈತರ(farmer) ಗೋಳು ಹೇಳತೀರದಾಗಿದೆ. ರಾಯಚೂರು ತಾಲೂಕಿನ ಮಮದಾಪೂರ, ಕಸವಿಕ್ಯಾಂಪ್, ಅಮರೇಶ್ವರ ಕ್ಯಾಂಪ್ ಸೇರಿದಂತೆ 8ರಿಂದ 10 ಹಳ್ಳಿಯ ಸಾವಿರಾರು ಎಕರೆ ಭತ್ತದ ಗದ್ದೆಗಳು ಒಣಗಿ ನಿಂತಿವೆ. ಇದರಿಂದ ಬೇಸತ್ತ ಕೆಲ ರೈತರು ಭತ್ತದ ಗದ್ದೆಗಳಿಗೆ ಕುರಿ ಬಿಟ್ಟರೆ. ಮತ್ತೆ ಕೆಲವರು ಟ್ರಾಕ್ಟರ್ ಮುಖಾಂತರ ಭತ್ತನಾಶಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರ ಬರ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಭತ್ತದ ನಾಟಿ, ಕಳೆ, ಗೊಬ್ಬರ, ಔಷಧಿ ಸಿಂಪಡನೆ ಎಲ್ಲ ಕೆಲಸವೂ ಪೂರ್ಣಗೊಂಡಿದೆ. ಎಕರೆಗೆ 15ರಿಂದ 20 ಸಾವಿರ ಖರ್ಚು ಮಾಡಲಾಗಿದೆ. ಆದ್ರೆ ಇಷ್ಟೆಲ್ಲಾ ಮಾಡಿದ್ರು ಬೆಳೆ ಮಾತ್ರ ಕೈಗೆ ಸಿಗದೆ ಒಣಗಿ ನೆಲ ಕಚ್ಚಿದೆ. ಸರ್ಕಾರ ಪರಿಹಾರ ನೀಡದಿದ್ರೆ ನಮಗೆ ಸಾವೇ ಗತಿ ಅಂತ ರೈತರು ಕಣ್ಣೀರಾಕ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಸುರತ್ಕಲ್‌ನಲ್ಲಿ ನಿರ್ಮಾಣ ಆಗುತ್ತಾ ಸಾವರ್ಕರ್ ಸರ್ಕಲ್? ಶಾಸಕ ಭರತ್ ಶೆಟ್ಟಿ ಆಸೆಗೆ ಬ್ರೇಕ್ ಹಾಕುತ್ತಾ ಸರ್ಕಾರ ?