ಕೊರೋನಾ ಸಂಕಷ್ಟದ ಸಮಯದಲ್ಲಿ ಸಹಾಯ: ಪ್ರೆಸ್ಟಿಜ್ ಕಂಪನಿಯಿಂದ 2 ಕೋಟಿ ರೂ. ನೆರವು
* ಕೊರೋನಾ ಸಂತ್ರಸ್ತರಿಗಾಗಿ 2 ಕೋಟಿ ರೂ.ವೆಚ್ಚ ಮಾಡಿದ ಪ್ರೆಸ್ಟಿಜ್ ಗ್ರೂಪ್
* ವಿಮಲಾಲಯ ಆಸ್ಪತ್ರೆ ಹಾಗೂ HBS ಆಸ್ಪತ್ರೆಯಲ್ಲಿ 24 ICU ಬೆಡ್ ನಿರ್ಮಾಣ
* ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಮಕ್ಕಳಿಗೆ ಊಟ ಹಾಗೂ ಪಡಿತರದ ವ್ಯವಸ್ಥೆ
ಬೆಂಗಳೂರು(ಮೇ.27): ಕೊರೋನಾ ಸಂಕಷ್ಟದ ಸಮಯದಲ್ಲಿ ಜನಪ್ರಿಯ ರಿಯಲ್ ಎಸ್ಟೇಟ್ ಕಂಪನಿ ಪ್ರೆಸ್ಟಿಜ್ ಗ್ರೂಪ್ ಜನರಿಗೆ ನೆರವಿನ ಹಸ್ತ ಚಾಚಿದೆ. ಹೌದು, ಸುಮಾರು 2 ಕೋಟಿ ರೂ.ಯನ್ನ ಸಾಮಾಜಿಕ ಜವಾಬ್ದಾರಿಯಡಿ ಕೊರೋನಾ ಸಂತ್ರಸ್ತರಿಗಾಗಿ ವೆಚ್ಚ ಮಾಡಿದೆ. ಪ್ರೆಸ್ಟಿಜ್ ಫೌಂಡೇಷನ್ ವತಿಯಿಂದ ವಿಮಲಾಲಯ ಆಸ್ಪತ್ರೆ ಹಾಗೂ HBS ಆಸ್ಪತ್ರೆಯಲ್ಲಿ 24 ICU ಬೆಡ್‌ಗಳನ್ನ ನಿರ್ಮಾಣ ಮಾಡಿದೆ. ಬೆಂಗಳೂರಿನ 20 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಮಕ್ಕಳಿಗೆ ಊಟ ಹಾಗೂ ಪಡಿತರದ ವ್ಯವಸ್ಥೆ ಕೂಡ ಮಾಡಿದೆ.
ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ, ರೈತರ ನೆರವಿಗೆ ಬರಬೇಕಿದೆ ಸರ್ಕಾರ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona