ಪುಷ್ಟಿ ಯೋಜನೆಗೆ ಗ್ರಹಣ: ಮನಗೂಳಿ ಪಟ್ಟಣದಲ್ಲಿ ಕಳಪೆ ಆಹಾರ ಪೂರೈಕೆ
ಪುಷ್ಟಿ ಯೋಜನೆ ಆಹಾರದಲ್ಲಿ ಹುಳಗಳು ಕಂಡು ಬಂದಿದ್ದು, ಹಸುಗೂಸುಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟವಾಡಿರುವ ಘಟನೆ ನಡೆದಿದೆ.
ಅಪೌಷ್ಟಿಕತೆ ನೀಗಿಸಲು ಜಾರಿಯಾದ ಪುಷ್ಟಿ ಯೋಜನೆಗೆ ಗ್ರಹಣ ಹಿಡಿದಿದ್ದು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ 15ನೇ ವಾರ್ಡ್'ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗಿದೆ. ಹಸುಗೂಸುಗಳಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟವಾಡಿದ್ದಾರೆ. ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದು, ಮಕ್ಕಳಿರುವ ಮನೆಗಳಿಗೆ ಅಂಗನವಾಡಿಯಿಂದ ಆಹಾರ ಪೂರೈಕೆ ಮಾಡಲಾಗುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.