Asianet Suvarna News Asianet Suvarna News

'ಜಲಧಾರೆ' ಯೋಜನೆ ಸೇರಿ 3 ಬೃಹತ್ ಯೋಜನೆಗೆ ಮೋದಿ ಹಸಿರು ನಿಶಾನೆ

ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಇಂದು ಮೂರು ಬೃಹತ್ ಯೋಜನೆಗೆ ಹಸಿರು ನಿಶಾನೆ ತೋರಿದರು. ದೇಶದ ಎರಡನೇ ಅತೀ ದೊಡ್ಡ ಎಕ್ಸಪ್ರೆಸ್‌ ವೇ ಆಗಿರುವ 'ಸೂರತ್ ಚೆನ್ನೈ ಎಕ್ಸಪ್ರೆಸ್ ವೇ' ಕಾಮಗಾರಿಗೆ ಪ್ರಧಾನಿ ಅಡಿಗಲ್ಲು ಹಾಕಿದರು.

ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಇಂದು ಮೂರು ಬೃಹತ್ ಯೋಜನೆಗೆ ಹಸಿರು ನಿಶಾನೆ ತೋರಿದರು. ದೇಶದ ಎರಡನೇ ಅತೀ ದೊಡ್ಡ ಎಕ್ಸಪ್ರೆಸ್‌ ವೇ ಆಗಿರುವ 'ಸೂರತ್ ಚೆನ್ನೈ ಎಕ್ಸಪ್ರೆಸ್ ವೇ' ಕಾಮಗಾರಿಗೆ ಪ್ರಧಾನಿ ಅಡಿಗಲ್ಲು ಹಾಕಿದರು. ನಂತರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಮಹತ್ವಾಕಾಂಕ್ಷೆಯ 'ಜಲಧಾರೆ' ಯೋಜನೆಗೆ ಶಿಲಾನ್ಯಾಸ ಮಾಡಿದರು.  ದೇಶದಲ್ಲಿಯೇ ಪ್ರಥಮವಾಗಿ ಸ್ಕಾಡಾ ತಂತ್ರಜ್ಞಾನ ಬಳಸಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ 5.50 ಲಕ್ಷ ಹೆಕ್ಟೇರ್‌ ರೈತರ ನೀರಾವರಿ ಪ್ರದೇಶಗಳಿಗೆ ನೀರುಣಿಸಲು ನೆರವಾದ ಎಡದಂಡೆ ಕಾಲುವೆಯ ಜಾಲದ ವಿಸ್ತರಣೆ ಮತ್ತು ಅತ್ಯಾಧುನಿಕ ರಿಮೋಟ್‌ ತಂತ್ರಜ್ಞಾನದ ಗೇಟ್‌ಗಳ 4699 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಮಗಾರಿಯ ಉದ್ಘಾಟನೆ ಹಾಗೂ ಜಲಧಾರೆ ಯೋಜನೆ ಅಡಿಯಲ್ಲಿ 2004 ಕೋಟಿ ರು.ಗಳ ವೆಚ್ಚದಲ್ಲಿ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಶಂಕು ಸ್ಥಾಪನೆ ಹಾಗೂ ಭಾರತ ಮಾಲಾ ಯೋಜನೆಯಡಿಯಲ್ಲಿ ಅಂದಾಜು 2000 ಕೋಟಿ ರು.ಗಳ ವೆಚ್ಚದಲ್ಲಿ ಸೂರತ್‌-ಚೆನ್ನೈ ಹೆದ್ದಾರಿ ನಿರ್ಮಾಣ 6 ಪಥ ಗ್ರೀನ್‌ ಫೀಲ್ಡ್‌ ಎಕ್ಸಪ್ರೆಸ್‌ ವೇ ಕಾಮಗಾರಿಗೂ ಚಾಲನೆ ನೀಡಿದ್ದಾರೆ.

Video Top Stories