ಉಡುಪಿಯಲ್ಲಿ ರಘುಪತಿ ಭಟ್ಟರ ಕೃಷಿ ಕ್ರಾಂತಿ, 2 ಸಾವಿರ ಎಕರೆ ಹಸಿರು
* ಉಡುಪಿಯಲ್ಲಿ ನಡೆಯುತ್ತಿದೆ ಕೃಷಿಕ್ರಾಂತಿ
* ಪಾಳುಬಿದ್ದ 2 ಸಾವಿರ ಎಕರೆ ಭೂಮಿ ಭತ್ತ ಬೆಳೆಯಲು ಸಿದ್ದ
* 250 ಕಿ ಮೀ ತೋಡುಗಳ ಹೂಳೆತ್ತಿಸಿದ ಶಾಸಕ
* ಲಾಕ್ ಡೌನ್ ಅಂದ್ರೆ ಸಂಕಷ್ಟ ಅಲ್ಲ. ಸಾಧನೆ
ಉಡುಪಿ(ಜೂ. 04) ಉಡುಪಿಯಲ್ಲಿ ಕೊರೋನಾ ಸಂಕಟದ ನಡುವೆಯೂ ಸದ್ದಿಲ್ಲದೆ ಕೃಷಿ ಕ್ರಾಂತಿ ನಡೆಯುತ್ತಿದೆ. ಪಾಳು ಬಿದ್ದ ಕೃಷಿಭೂಮಿಯಲ್ಲಿ ಭತ್ತದ ಕೃಷಿ ನಡೆಯುತ್ತಿದೆ. ಪಾಳು ಬಿದ್ದ ಎರಡು ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಕೃಷಿಯೋಗ್ಯಗೊಳಿಸಲಾಗಿದೆ.
ಕರ್ನಾಟಕದ ಕೃಷಿ ಮೇಲೆ ಚೀನಾ ಕರಿನೆರಳು
ಲಾಕ್ ಡೌನ್ ಸಂಕಟದಲ್ಲಿ ನಲುಗಿದ್ದವರಿಗೆ ಕೃಷಿ ಚಟುವಟಿಕೆ ಹೊಸ ಲವಲವಿಕೆ ನೀಡಿದೆ. ಈ ಕೃಷಿಕ್ರಾಂತಿಯ ರುವಾರಿ ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಕೆಲಸವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.