Asianet Suvarna News Asianet Suvarna News

ಬೆಳೆಗೆ ಕೊರೋನಾ ಭೀತಿ: ಭಾರತದ ಕೃಷಿ ಉತ್ಪಾದನೆ ಮಣ್ಣು ಮುಕ್ಕಿಸಲು ಚೀನಾ ಮಾಸ್ಟರ್ ಪ್ಲ್ಯಾನ್..!

* ಚೀನಾ ಕಳುಹಿಸುವ ಬೀಜ ಬಿತ್ತನೆ ಮಾಡಿದ್ರೆ ಸಾಕು ಬೆಳೆ ಸಂಪೂರ್ಣ ನಾಶ
* ದೇಶವ್ಯಾಪ್ತಿ ಬೆಳೆಗಳಿಗೆ ವೈರಸ್ ವ್ಯಾಪಿಸುವ ಭೀತಿ
* ಅನಾಮಧೆಯ ಬೀಜ ಪಾರ್ಸಲ್ ಬಂದ್ರೆ ಬಿತ್ತನೆ ಮಾಡಬೇಡಿ

Farmers Should Be Aware of China Seeds in Says Kalaburagi Agriculture Department grg
Author
Bengaluru, First Published Jun 2, 2021, 12:57 PM IST

ಕಲಬುರಗಿ(ಜೂ.02): ಮನುಷ್ಯನಿಗಾಯ್ತು ಇದೀಗ ಬೆಳೆಗಳಿಗೆ ಕೊರೋನಾ ಭೀತಿ ಎದುರಾಗಿದೆ. ಹೌದು, ಭಾರತದ ಕೃಷಿ ಉತ್ಪಾದನೆ ಮಣ್ಣು ಮುಕ್ಕಿಸಲು ಚೀನಾ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಕಲಬುರಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕರೇ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. 

ಈ ಬಗ್ಗೆ ಇಂದು(ಬುಧವಾರ) ನಗರದಲ್ಲಿ ಮಾಹಿತಿ ನೀಡಿದ ಕಲಬುರಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಅವರು, ಚೀನಾ ಕಳುಹಿಸುವ ಬೀಜ ಬಿತ್ತನೆ ಮಾಡಿದ್ರೆ ಸಾಕು ಬೆಳೆ ಸಂಪೂರ್ಣ ನಾಶವಾಗಲಿದೆ. ಅಷ್ಟೇ ಅಲ್ಲ, ದೇಶವ್ಯಾಪ್ತಿ ಬೆಳೆಗಳಿಗೆ ವೈರಸ್ ವ್ಯಾಪಿಸಲಿದೆ. ಅನಾಮಧೆಯ ಬೀಜ ಪಾರ್ಸಲ್ ಬಂದ್ರೆ ಬಿತ್ತನೆ ಮಾಡಬೇಡಿ. ಸುಟ್ಟು ಹಾಕಿ ಇಲ್ಲವೇ ಕೃಷಿ ಇಲಾಖೆಗೆ ಮಾಹಿತಿ ಕೊಡಿ ಎಂದು ರೈತರಿಗೆ ಸ್ವತಃ ಕೃಷಿ ಇಲಾಖೆ ಎಚ್ಚರಿಕೆ ನೀಡಿದ್ದಾರೆ. 

ರಾಯಚೂರಲ್ಲಿ ಹೆಸರಿಗೆ ಸೀಮಿತ ಕಠಿಣ ಲಾಕ್‌ಡೌನ್‌

ಚೀನಾ ಈ ರೀತಿ ವೈರಸ್ ಯುಕ್ತ ಬೀಜ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಕೆನಡಾ, ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಈ ವೈರಸ್ ಹಾವಳಿ ಕಾಣಿಸಿಕೊಂಡಿದೆ. ಹೀಗಾಗಿ ರೈತರು ಅನಾಮಧೆಯ ಬೀಜ ಬಿತ್ತನೆಗೆ ಬಳಸಬೇಡಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಕರೆ ನೀಡಿದ್ದಾರೆ. 
 

Follow Us:
Download App:
  • android
  • ios