Asianet Suvarna News Asianet Suvarna News

ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬದುಕು 'ಹಸನಾ'ಗಿಸಿದ ಮುಹಮ್ಮದ್!

ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.
 

ಮಂಗಳೂರು (ಏ.30): ಲಾಕ್‍ಡೌನ್‍ನಿಂದ ಕೆಲಸ ಕಾರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ಇರುವವರ ಸಂಕಷ್ಟವನ್ನು ಅರ್ಥ ಮಾಡಿ ಬಾಡಿಗೆದಾರರ ತಿಂಗಳ ಬಾಡಿಗೆ ಮನ್ನಾ ಮಾಡುವುದೇ ಇಂದು ವಿಶೇಷ ಎನಿಸುತ್ತದೆ. ಆದರೆ ಮುಹಮ್ಮದ್ ಹಸನ್ ತನ್ನ ಕಟ್ಟಡದಲ್ಲಿರುವ ಮೆಡಿಕಲ್, ತರಕಾರಿ, ದಿನಸಿ ಸಾಮಗ್ರಿ, ಬೇಕರಿಗಳ ಕೂಡಾ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿರುವುದು ವಿಶೇಷದಲ್ಲಿ ವಿಶೇಷವಾಗಿದೆ. ಯಾಕೆಂದರೆ ಲಾಕ್‍ಡೌನ್ ಆಗಿದ್ದರೂ ಈ ಅಂಗಡಿಗಳನ್ನು ಮಧ್ಯಾಹ್ನದವರೆಗೆ ತೆರೆದು ವ್ಯಾಪಾರ ನಡೆಸಲು ಅವಕಾಶ ಇದೆ.

ಇದನ್ನೂ ನೋಡಿ | ಆಸ್ಪತ್ರೆಯಿಂದ 7 ಮಂದಿಗೆ ಕೋರನಾ; ಮಂಗಳೂರಲ್ಲಿ ಹೆಚ್ಚಿದ ಆತಂಕ!...

ಬಿ.ಎಚ್.ಕಾಂಪ್ಲೆಕ್ಸ್‍ನಲ್ಲಿರುವ 21 ಅಂಗಡಿಗಳಲ್ಲಿ  ಹೊಟೇಲ್, ಮೆಡಿಕಲ್,  ದಿನಸಿ ಸಾಮಗ್ರಿ, ಬೇಕರಿ, ತರಕಾರಿ, ಫ್ಯಾನ್ಸಿ, ಟ್ರಾವೆಲ್ ಏಜನ್ಸಿ, ಬ್ಯೂಟಿ ಪಾರ್ಲರ್, ಸಲೂನ್, ಕ್ರಿಶ್ಚಿಯನ್ ಧರ್ಮದ ಪ್ರಾರ್ಥನಾ ಕೊಠಡಿ ಸೇರಿ ಒಟ್ಟು 21 ಅಂಗಡಿಗಳು ಇವೆ. ಅಲ್ಲದೆ 12 ಬಾಡಿಗೆ ಮನೆಗಳೂ ಇವೆ.