Asianet Suvarna News Asianet Suvarna News

Mandya: ಲಂಚಕ್ಕಾಗಿ ಪಿಡಿಒಗಳಿಗೆ ಕಿರುಕುಳ: ಇಓ ಭೈರಪ್ಪ ವಿರುದ್ದ ದೂರು

ಜನಸೇವೆ ಮಾಡಿ ಅಂದ್ರೆ ಸಿಕ್ಕಷ್ಟು ಬಾಚಿಕೊಳ್ಳೋದೆ ಈತನ ಕೆಲಸ. ಹೌದು! ಪ್ರತಿ ಕೆಲಸಗಳಿಗೂ ಪಿಡಿಒಗಳಿಂದ ಪರ್ಸಂಟೇಜ್ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಇಓ ಭೈರಪ್ಪ ಕರ್ಮಕಾಂಡ ಬಯಲಾಗಿದೆ. 

First Published Feb 3, 2022, 11:11 AM IST | Last Updated Feb 3, 2022, 11:11 AM IST

ಮಂಡ್ಯ (ಫೆ.03): ಜನಸೇವೆ ಮಾಡಿ ಅಂದ್ರೆ ಸಿಕ್ಕಷ್ಟು ಬಾಚಿಕೊಳ್ಳೋದೆ ಈತನ ಕೆಲಸ. ಹೌದು! ಪ್ರತಿ ಕೆಲಸಗಳಿಗೂ ಪಿಡಿಒಗಳಿಂದ ಪರ್ಸಂಟೇಜ್ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಇಓ ಭೈರಪ್ಪ ಕರ್ಮಕಾಂಡ ಬಯಲಾಗಿದೆ. ಪಿಡಿಒ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಭೈರಪ್ಪ ತಿಂಗಳಲ್ಲಿ ನಡೆಯುವ ವ್ಯವಹಾರಗಳ ಮೇಲೆ 3% ಕಮಿಷನ್ ಪಡೆಯುತ್ತಿದ್ದರು. 

Mandya: ಆರೂವರೆ ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

ದುಡ್ಡು ಕೊಟ್ಟರೆ ಕೆಲಸ ಮಾಡಿಕೊಡುತ್ತಿದ್ದರು ಇಲ್ಲದಿದ್ದರೆ ಟಾರ್ಗೇಟ್ ಮಾಡುತ್ತಿದ್ದರು. ಮಾತ್ರವಲ್ಲದೇ ಪಂಚಾಯಿತಿಗಳಲ್ಲಿ ಇ-ಸ್ವತ್ತು ತೆಗೆದರೂ ಭೈರಪ್ಪರಿಗೆ ಲಂಚ ಕೊಡಲೆಬೇಕಿತ್ತು. ಪಿಡಿಒಗಳ ಜೊತೆ ನಡೆಸಿರುವ ಲಂಚದ ಮಾತುಕತೆಗೆ ಸಾಕ್ಷಿ ಲಭ್ಯವಾಗಿದ್ದು,  ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಳಿ ಎಕ್ಸ್‌ಕ್ಲೂಸಿವ್ ಆಡಿಯೋ ವಿಡಿಯೋ ಇದೆ. ಇನ್ನು ಲಂಚಬಾಕ ಇಒ ವಿರುದ್ದ ಕಳೆದ ಡಿಸೆಂಬರ್‌ನಲ್ಲಿ ಸಾಕ್ಷಿ ಸಮೇತ ದೂರು ನೀಡಿದರೂ ಮಂಡ್ಯ ಸಿಇಒ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ನೋಡಿ..