Asianet Suvarna News Asianet Suvarna News

ಭಯ ಬೀಳಿಸುವ ಶರಾವತಿ ಹಿನ್ನೀರಿನಲ್ಲಿ ಈಜಿ ಗೆದ್ದ ಬಾಲಕಿಗೊಂದು ಸನ್ಮಾನದ ಸಲಾಂ

ಶರಾವತಿ ನದಿ ಹಿನ್ನೀರಿನ ಹಸಿರುಮಕ್ಕಿ ಹಾಗೂ ಹೊಳೆಬಾಗಿಲು ಪ್ರದೇಶದಲ್ಲಿ ಈಜಿ ದಾಖಲೆ ನಿರ್ಮಿಸಿದ ಬಾಲಕಿ ಮಿಥಿಲಾ ಹೆಸರನ್ನು ಸಾಗರ ತಾಲೂಕಿನ ಕುಂಟಗೋಡು ಗ್ರಾಮದ ಕೆರೆಗೆ ನಾಮಕರಣ ಮಾಡಲಾಯಿತು. ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಕೆರೆಗೆ ನಾಮಕರಣ ಮಾಡಿ ಬಾಲಕಿ ಮಿಥಿಲಾಳನ್ನು ಸನ್ಮಾಸಿದರು. ನಂತರ ಮಾತನಾಡಿ ಪುಟ್ಟ ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಎಳೆಯ ವಯಸ್ಸಿನಲ್ಲಿಯೇ ಶರಾವತಿ ಹಿನ್ನೀರಿನ ಆಗಾಧ ಜಲರಾಶಿ ಈಜಿ ನಾಡಿನ ಗಮನ ಸೆಳೆದಿದ್ದಾಳೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಸಲುವಾಗಿ ಬಾಲಕಿ ಮಿಥಿಲಾ ಹೆಸರನ್ನು ಕೆರೆಗೆ ಇಟ್ಟು ಗೌರವಿಸಿ ಗ್ರಾಮಸ್ಥರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.