Asianet Suvarna News Asianet Suvarna News

India@75: ವಿಜಯಪುರದಲ್ಲಿ ಶಿವಲಿಂಗಕ್ಕೆ ರಾಷ್ಟ್ರ ಧ್ವಜದಿಂದ ಅಲಂಕಾರ

ವಿಜಯಪುರದಲ್ಲಿ ದೇಗುದಲ್ಲೂ ಅಮೃತ ಮಹೋತ್ಸವ ಸಂಭ್ರಮ ಮನೆ ಮಾಡಿದೆ.  ನಗರದ ಜಾಡರ ಓಣಿಯಲ್ಲಿರುವ ಮಲ್ಲಿಕಾರ್ಜುನ ದೇಗುಲದ ಶಿವಲಿಂಗ ಮೂರ್ತಿಗೂ ಸಹ ರಾಷ್ಟ್ರಧ್ವಜದಿಂದ ಅಲಂಕಾರ ಮಾಡಲಾಗಿದೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ 

Aug 15, 2022, 10:23 PM IST

ವಿಜಯಪುರ, (ಆಗಸ್ಟ್.15): ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆದಿದೆ. ಎಲ್ಲರ ಮನೆ ಮನದಲ್ಲಿ ತ್ರಿವರ್ಣ ಧ್ವಜ ರಂಗು ಮೂಡಿಸಿದೆ.

INDIA@75: ಉಡುಪಿಯ ಎಲ್ಲೆಡೆ ತ್ರಿವರ್ಣ ವೈಭವ!

ಇನ್ನು ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸರ್ಕಾರಿ ಮುಖ್ಯ ಕಚೇರಿಗಳಿಗೆ ಹಾಗೂ ಪ್ರೇಕ್ಷಣ ಸ್ಥಳಗಳಲ್ಲಿ ವಿಶೇಷವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಲೈಟಿಂಗ್ಸ್‌ ಎಲ್ಲೆಡೆ ಕಂಗೊಳಿಸಿತು. ಮತ್ತೊಂದೆಡೆ ವಿಜಯಪುರದಲ್ಲಿ ದೇಗುದಲ್ಲೂ ಅಮೃತ ಮಹೋತ್ಸವ ಸಂಭ್ರಮ ಮನೆ ಮಾಡಿದೆ.  ನಗರದ ಜಾಡರ ಓಣಿಯಲ್ಲಿರುವ ಮಲ್ಲಿಕಾರ್ಜುನ ದೇಗುಲದ ಶಿವಲಿಂಗ ಮೂರ್ತಿಗೂ ಸಹ ರಾಷ್ಟ್ರಧ್ವಜದಿಂದ ಅಲಂಕಾರ ಮಾಡಲಾಗಿದೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ