Letter To Modi : ಪ್ರಧಾನಿಗೆ ಪತ್ರ ಬರೆದ ಚಿಣ್ಣರು
ಮೊಬೈಲ್ ಲೋಕದಲ್ಲೇ ಮುಳುಗಿರುವ ಮಕ್ಕಳಿಗೆ ಇನ್ ಲ್ಯಾಂಡ್ ಲೆಟರ್ ಅಥವಾ ಪೋಸ್ಟ್ ಕಾರ್ಡ್ ಬಳಕೆಯನ್ನು ತಿಳಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಹೊಸ ಅಭಿಯಾನವನ್ನು ಆರಂಭಿಸಿದೆ. ಪ್ರಧಾನಮಂತ್ರಿಗೆ ಪತ್ರ ಬರೆಯುವ ಅಭಿಯಾನವನ್ನು ಆರಂಭಿಸಿದ್ದು, ದೇಶಾದ್ಯಂತ 75 ಲಕ್ಷ ಪೋಸ್ಟ್ ಕಾರ್ಡ್ ಬರೆಸುವ ಗುರಿ ಇರಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಎಲೆ ಮರೆಯ ಕಾಯಿಗಳು ಅಥವಾ ನನ್ನ ಕನಸಿನ 2047ರ ಭಾರತ ಎನ್ನುವುದು ವಿಷಯ. ಶಿರಸಿಯ ಸಂಪಖಂಡದ ಗಜಾನನ ಪ್ರೌಢಶಾಲೆ ವಿದ್ಯಾರ್ಥಿಗಳು ಈಗಾಗಲೇ ಅಭಿಯಾನದಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಹಂತಹಂತವಾಗಿ ಈ ಅಭಿಯಾನ ನಡೆಯಲಿದೆ.
ಮೊಬೈಲ್ ಲೋಕದಲ್ಲೇ ಮುಳುಗಿರುವ ಮಕ್ಕಳಿಗೆ ಇನ್ ಲ್ಯಾಂಡ್ ಲೆಟರ್ (Inland Letter) ಅಥವಾ ಪೋಸ್ಟ್ ಕಾರ್ಡ್ (Post Card) ಬಳಕೆಯನ್ನು ತಿಳಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ (India Post) ಹೊಸ ಅಭಿಯಾನವನ್ನು ಆರಂಭಿಸಿದೆ. ಪ್ರಧಾನಮಂತ್ರಿಗೆ ( Prime minister) ಪತ್ರ ಬರೆಯುವ ಅಭಿಯಾನವನ್ನು ಆರಂಭಿಸಿದ್ದು, ದೇಶಾದ್ಯಂತ 75 ಲಕ್ಷ ಪೋಸ್ಟ್ ಕಾರ್ಡ್ ಬರೆಸುವ ಗುರಿ ಇರಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಎಲೆ ಮರೆಯ ಕಾಯಿಗಳು ಅಥವಾ ನನ್ನ ಕನಸಿನ 2047ರ ಭಾರತ ಎನ್ನುವುದು ವಿಷಯ. ಶಿರಸಿಯ ಸಂಪಖಂಡದ ಗಜಾನನ ಪ್ರೌಢಶಾಲೆ ವಿದ್ಯಾರ್ಥಿಗಳು ಈಗಾಗಲೇ ಅಭಿಯಾನದಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯವರಿಗೆ (Narendra Modi) ಪತ್ರ ಬರೆದಿದ್ದು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಹಂತಹಂತವಾಗಿ ಈ ಅಭಿಯಾನ ನಡೆಯಲಿದೆ.
Uttara Kannada: ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ, ಮರಗಳು ಮಂಗಮಾಯ!
ಆಜಾದೀ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಅಂಚೆ ಇಲಾಖೆ ದೇಶಾದ್ಯಂತ 75 ಲಕ್ಷ ಪೋಸ್ಟ್ ಕಾರ್ಡ್ ಬರೆಯೋ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ವಿಶೇಷತೆಯೆಂದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಲಾ ಮಕ್ಕಳು ಪತ್ರ ಬರೆದು ದೇಶದ ಮುಂದಿನ ಭವಿಷ್ಯ ಹಾಗೂ ಸ್ವಾಂತತ್ರ್ಯಕ್ಕಾಗಿ ಮಡಿದವರ ಕುರಿತ ವಿಚಾರಗಳನ್ನು ಅವರ ಮುಂದಿಡುತ್ತಾರೆ. 4ನೇ ತರಗತಿಯಿಂದ 12ನೇ ತರಗತಿಯವರೆಗಿನ ಮಕ್ಕಳಿಗಾಗಿ ಈ ಅಭಿಯಾನ ಕೈಗೊಂಡಿದ್ದು, ಪೋಸ್ಟ್ ಕಾರ್ಡ್ ಮೂಲಕ ಮಕ್ಕಳ ವಿವಿಧ ವಿಚಾರಗಳು ದೇಶದ ಪ್ರಧಾನಿಯವರನ್ನು ತಲುಪಲಿದೆ.