ಆಗ ಕುಡಿಯುವ ನೀರಿಗೆ ಹಾಹಾಕಾರ, ಈಗ ಅಂತರ್ಜಲವೇ ಧಾರಾಕಾರ; ರೈತರಿಗೆ ತಪ್ಪಿಲ್ಲ ಆತಂಕ!

ವಿದ್ಯುತ್ ಮೋಟಾರ್ ಆಫ್ ಇದ್ದರೂ ಬೋರವೆಲ್ ಪೈಪ್‌ನಿಂದ ಹೊರ ಚಿಮ್ಮುತ್ತಿರುವ ನೀರು! ಅರೇ ಇದೇನಪ್ಪಾ ಆಶ್ಚರ್ಯ ಅಂತೀರಾ? ಹೌದು. ಇಂತದ್ದೊಂದು ಅಪರೂಪದ ಸಂಗತಿಗೆ ಸಾಕ್ಷಿಯಾಗಿದೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮ.

First Published Sep 13, 2020, 5:27 PM IST | Last Updated Sep 13, 2020, 5:27 PM IST

ವಿಜಯಪುರ (ಸೆ. 13): ವಿದ್ಯುತ್ ಮೋಟಾರ್ ಆಫ್ ಇದ್ದರೂ ಬೋರವೆಲ್ ಪೈಪ್‌ನಿಂದ ಹೊರ ಚಿಮ್ಮುತ್ತಿರುವ ನೀರು! ಅರೇ ಇದೇನಪ್ಪಾ ಆಶ್ಚರ್ಯ ಅಂತೀರಾ? ಹೌದು. ಇಂತದ್ದೊಂದು ಅಪರೂಪದ ಸಂಗತಿಗೆ ಸಾಕ್ಷಿಯಾಗಿದೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮ.

ಇಲ್ಲಿನ ವಿರುಪಾಕ್ಷಯ್ಯ ಮಠ ಎಂಬುವರ ಜಮೀನಿನ ಬೋರ್‌ವೆಲ್‌ನಿಂದ  ಅಂತರ್ಜಲ ತನ್ನಿಂದ ತಾನೇ ಚಿಮ್ಮುತ್ತಿದೆ. ಕೆಲ ವರ್ಷಗಳ ಹಿಂದೆ 500 ಅಡಿಯಷ್ಟು ಆಳಕ್ಕೆ ಬೋರ್‌ವೆಲ್ ಕೊರೆಯಿಸಿದ್ದರು ವಿರುಪಾಕ್ಷಯ್ಯ. ಕಳೆದ ಮೂರು ದಿನಗಳಿಂದ ತನ್ನಿಂದ ತಾನೇ ಉಕ್ಕಿ ಬರುತ್ತಿರುವ ಅಂತರ್ಜಲ ನೋಡಿ ಗ್ರಾಮಸ್ಥರಿಗೆ ಅಚ್ಚರಿಗೊಂಡಿದ್ದಾರೆ. 

ಆಫ್‌ ಫೀಲ್ಡ್‌ನಲ್ಲೂ ಆರ್‌ಸಿಬಿ ಸ್ಫೂರ್ತಿ: ಕೊರೊನಾ ವಾರಿಯರ್ಸ್‌ಗೆ ಸೆಲ್ಯೂಟ್!

ಅಂತರ್ಜಲ ನೋಡಿ ಖುಷಿಪಡಬೇಕಾದ ರೈತರು ನಿರಂತವಾಗಿ ಹರಿದು ಮೆಕ್ಕೆಜೋಳ ಜಮೀನಿಗೆ ನುಗ್ಗುತ್ತಿರುವುದರಿಂದ  ಆತಂಕಗೊಂಡಿದ್ಧಾರೆ. 
 

Video Top Stories