Asianet Suvarna News Asianet Suvarna News

ದಮ್ಮಯ್ಯ ಅಂದ್ರೂ ಸಿಗ್ತಿಲ್ಲ ಖಾಸಗಿ ಆಸ್ಪತ್ರೆ ವೈದ್ಯರು: ಸಂಕಷ್ಟದಲ್ಲಿ ರೋಗಿಗಳು..!

ಜೀವಕ್ಕೆ ಹೆದರಿ ಮನೇಲಿ ಕೂತ ಖಾಸಗಿ ಆಸ್ಪತ್ರೆ ವೈದ್ಯರು| ಹಗಲು ರಾತ್ರಿ ಎನ್ನದೆ ಕೊರೋನಾ ರೋಗಿಗಳ ಸೇವೆಯಲ್ಲಿ ನಿರತರಾದ ಸರ್ಕಾರಿ ಆಸ್ಪತ್ರೆಗಳ ವೈದ್ಯರು|  ರೋಗಿಗಳು ಎಷ್ಟೇ ಗೋಗರೆದರೂ ಆಸ್ಪತ್ರೆಗಳನ್ನ ಮುಖ ಮಾಡದ ಡಾಕ್ಟರ್‌ಗಳು|
 
First Published Apr 15, 2020, 2:19 PM IST | Last Updated Apr 15, 2020, 2:19 PM IST

ಬೆಂಗಳೂರು(ಏ.15): ಲಾಕ್‌ಡೌನ್‌ ಸಂದರ್ಭದಲ್ಲಿ ರೋಗಿಗಳಿಗೆ ಕೊರೋನಾ ಹೊರತುಪಡಿಸಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಖಾಸಗಿ ಆಸ್ಪತ್ರೆಗಳ ವೈದ್ಯರು ಜೀವಕ್ಕೆ ಹೆದರಿ ಮನೇಲಿ ಕೂತಿದ್ದಾರೆ. ಮಹಾಮಾರಿ ಕೊರೋನಾ ವೈರಸ್‌ನ್ನ ದೇಶದಿಂದ ಹೊಡೆದೋಡಿಸಲು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. 

ಹುಬ್ಬಳ್ಳಿಯಲ್ಲಿ ಬಿಗಿ ಲಾಕ್‌ಡೌನ್‌: ಹಾಲು, ದಿನಸಿ ಖರೀದಿಗೂ ಅವಕಾಶವಿಲ್ಲ

ಆದರೆ, ಕೊರೋನಾ ವೈರಸ್‌ ಹೊರತು ಪಡಿಸಿದ ಇತರೆ ರೋಗಗಳಿಗೆ ಚಿಕಿತ್ಸೆ ಕೊಡಬೇಕಾದ ಖಾಸಗಿ ಆಸ್ಪತ್ರೆಗಳ ವೈದ್ಯರು ಮಾತ್ರ ಆಸ್ಪತ್ರೆಗಳನ್ನ ಓಪನ್‌ ಮಾಡದೆ ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ. ರೋಗಿಗಳು ಎಷ್ಟೇ ಗೋಗರೆದರೂ ಡಾಕ್ಟರ್‌ಗಳು ಮಾತ್ರ ಆಸ್ಪತ್ರೆಗಳನ್ನ ಮುಖ ಮಾಡದೆ ಇರೋದು ದುರ್ದೈವದ ಸಂಗತಿಯಾಗಿದೆ.