Asianet Suvarna News Asianet Suvarna News

ಇದ್ಯಾವ ಸೀಮೆ ಲೆಕ್ಕ? ಹೂ ಬೆಳೆಗಾರರು ಮತ್ತು ವ್ಯಾಪಾರಸ್ಥರ ನಡುವೆ ವಾಗ್ವಾದ!

ಗದಗ ಎಪಿಎಮ್‌ಸಿ ಫ್ಲವರ್ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಹೂ ಬೆಳೆ ರೈತರು ನಡುವೆ ವಾಗ್ವಾದಕ್ಕೆ ವೇದಿಕೆಯಾಗಿದೆ. ವ್ಯಾಪಾರಕ್ಕೆ ಬಂದ ರೈತರು ವರ್ತಕರ ನಡುವೆ ಕೆಲಕಾಲ ಜಟಾಪಟಿ ನಡೆಯುತ್ತಿದೆ. 

First Published Sep 12, 2021, 3:05 PM IST | Last Updated Sep 12, 2021, 3:05 PM IST

ಗದಗ (ಸೆ. 12): ಎಪಿಎಮ್‌ಸಿ ಫ್ಲವರ್ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಹೂ ಬೆಳೆ ರೈತರು ನಡುವೆ ವಾಗ್ವಾದಕ್ಕೆ ವೇದಿಕೆಯಾಗಿದೆ. ವ್ಯಾಪಾರಕ್ಕೆ ಬಂದ ರೈತರು ವರ್ತಕರ ನಡುವೆ ಕೆಲಕಾಲ ಜಟಾಪಟಿ ನಡೆಯುತ್ತಿದೆ. ಹೀಗಾಗಿ ರೈತರ ಹೂ ಮಾರಾಟವಾಗದೇ ಹಾಗೆ ಉಳಿಯುತ್ತಿವೆ. ಇಷ್ಟೆಲ್ಲ ಗದ್ದಲ ಗಲಾಟೆಗೆ ಕಾರಣವಾಗಿದ್ದು 10 ಕೆಜಿ ಹೂವಿಗೆ 2 ಕೆಜಿ ಎಕ್ಸ್‌ಟ್ರಾ ಹೂ ಕೊಡಬೇಕು ಅನ್ನೋ ನಿಯಮ! 

1 ಕ್ವಿಂಟಲ್‌ಗೆ 20 ಕೆಜಿ ಹೂ ಎಕ್ಸ್‌ಟ್ರಾ ಕೊಡಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯ! ಆದ್ರೆ 10 ಕೆಜಿಗೆ 10 ಕೆಜಿ ಮಾತ್ರ ಕೊಡ್ತೀವಿ ಅದ್ಯಾಕೆ ಎಕ್ಸ್‌ಟ್ರಾ ಕೊಡಬೇಕು ಎಂಬುದು ರೈತರ ವಾದ. ಕಡಿಮೆ ಬೆಲೆಗೆ ಖರೀದಿಸಿ, ಮತ್ತೆ 10 ಕೆಜಿ ಹೂವಿಗೆ 2 ಕೆಜಿ ಎಕ್ಸ್‌ಟ್ರಾ ಕೊಡ್ಬೇಕಾ? ಕ್ವಿಂಟಲ್‌ಗೆ 20 ಕೆಜಿ ಎಕ್ಸ್‌ಟ್ರಾ ಕೊಡಬೇಕೆಂಬುದು ಯಾವ ನ್ಯಾಯ? ನಾವು ಬದುಕುವುದಾದ್ರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸುತ್ತಿದ್ದಾರೆ ನೊಂದ ರೈತರು.