ಅಂತ್ಯಕ್ರಿಯೆ ಮಾಡೋ ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್ ನೀಡದ ಗದಗ ನಗರಸಭೆ
* ಸಂಕಷ್ಟಗಳನ್ನ ಎದುರಿಸುತ್ತಿರುವ ಸ್ಮಶಾನದ ಸಿಬ್ಬಂದಿ
* ಕೋವಿಡ್ ಸುರಕ್ಷಾ ಕ್ರಮಗಳಿಲ್ಲದೆ ಅಂತ್ಯ ಸಂಸ್ಕಾರ
* ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ನೀಡದ ನಗರಸಭೆ
ಗದಗ(ಜೂ.09): ಕೋವಿಡ್ ಸುರಕ್ಷಾ ಕ್ರಮಗಳಿಲ್ಲದೆ ಅಂತ್ಯ ಸಂಸ್ಕಾರ ನಡೆಸುತ್ತಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಸ್ಮಶಾಸನದ ಸಿಬ್ಬಂದಿಗೆ ನಗರಸಭೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಯಾವುದೇ ರೀತಿ ಸುರಕ್ಷಾ ವಸ್ತುಗಳನ್ನ ಪೂರೈಸಿಲ್ಲ. ಹೀಗಾಗಿ ಸ್ಮಸಾನದಲ್ಲಿ ಸಂತ್ಯಸಂಸ್ಕಾರ ನಡೆಸುತ್ತಿರುವ ಸಿಬ್ಬಂದಿ ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ. ಈ ಮೂಲಕ ಗದಗ-ಬೆಟಗೇರಿ ನಗರಸಭೆ ಅಷ್ಟೋಂದು ಬಡವಾಯ್ತಾ ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿದೆ.