ಭೂಕಂಪನಕ್ಕೆ ಬೆಚ್ಚಿಬಿದ್ದ ವಿಜಯಪುರ: ಪದೇ ಪದೆ ಭೂಮಿ ಕಂಪಿಸಿರೋದ್ಯಾಕೆ?

*  ವಿಜಯಪುರ ಜಿಲ್ಲೆಯಲ್ಲಿ ನಿಲ್ಲದ ಭೂಕಂಪನ
*  ಇಂದು ಬೆಳಿಗ್ಗೆ ಮತ್ತೆ ಮುಳವಾಡ ಗ್ರಾಮದಲ್ಲಿ ನಡುಗಿದ ಭೂಮಿ
*  ಈ ವಾರ ಮುಳವಾದ ಗ್ರಾಮಕ್ಕೆ ತಜ್ಞರ ತಂಡ ಭೇಟಿ 

First Published Oct 11, 2021, 12:18 PM IST | Last Updated Oct 11, 2021, 12:18 PM IST

ವಿಜಯಪುರ(ಅ.11):  ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಆತಂಕ ನಿಲ್ತಾಯಿಲ್ಲ. ಜಿಲ್ಲೆಯ ಮುಳವಾಡ ಗ್ರಾಮದಲ್ಲಿ ಮತ್ತೆ ಭೂಮಿ ನಡುಗಿದ ಅನುಭವವಾಗಿದೆ. ಇಂದು(ಸೋಮವಾರ) ಬೆಳಗಿನ 6.03 ಕ್ಕೆ ಮತ್ತೆ ಭೂಕಂಪನವಾಗಿದೆ. ನಿನ್ನೆ ಬೆಳಿಗ್ಗೆ 5.15ಕ್ಕೆ ಹಾಗೂ 7.10 ರಂದು ಭೂಮಿ ಕಂಪಿಸಿತ್ತು, ಈಗ ಇಂದು ಬೆಳಿಗ್ಗೆ ಕೂಡ ಭೂಕಂಪನವಾಗಿದೆ. ಸತತ ಭೂಕಂಪನದಿಂದ ಮುಳವಾಡ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಸಲಿ ಅಂತ ಆಗ್ರಹಿಸಿದ್ದಾರೆ. ಈ ವಾರ ಮುಳವಾದ ಗ್ರಾಮಕ್ಕೆ ತಜ್ಞAರ ತಂಡ ಭೇಟಿ ಕೊಡಲಿದೆ. ಭೂಕಂಪನದ ಬಗ್ಗೆ ಅಧ್ಯಯನ ಮಾಡಲಿದ್ದಾರೆ ಅಂತ ಉಪವಿಭಾಗಾಧಿಕಾರಿ ಬಲರಾಮ್‌ ಲಮಾಣಿ ಪ್ರತಕ್ರಿಯೆಯನ್ನ ಕೊಟ್ಟಿದ್ದಾರೆ. 

ತೈಲೆ ಬೆಲೆ ಏರಿಕೆಯಿಂದ ಕೆಂಗೆಟ್ಟ ಬಿಜೆಪಿ ಸರ್ಕಾರ: ಶಾಸಕರ ಭವನದ ಕಾರುಬಾರಿಗೆ ಬ್ರೇಕ್‌..?