Asianet Suvarna News

ಬಳ್ಳಾರಿ: ಕಾಂಗ್ರೆಸ್‌ನಿಂದ ಮನೆ-ಮನೆಗೆ ಆಕ್ಸಿಜನ್, ಸಂಪರ್ಕಿಸಿ....

Jun 14, 2021, 8:04 PM IST

ಬಳ್ಳಾರಿ, (ಜೂನ್.14): ಕೊರೋನಾ ಎರಡನೇಯಲ್ಲಿ ರಾಜ್ಯದಲ್ಲಿ ಆಸ್ಪತ್ರೆ ಹಾಗೂ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಇದರ ಮಧ್ಯೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಮನೆ-ಮನೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ತಲುಪಿಸೋ ವ್ಯವಸ್ಥೆ ಮಾಡಲು ಮುಂದಾಗಿದೆ.

ಇದಕ್ಕೆ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರುಆಕ್ಸಿಜನ್ ಬ್ಯಾಂಕ್ ಉದ್ಘಾಟನೆ ಮಾಡಿದ್ದು,  ಪ್ರತಿಯೊಂದು ಏರಿಯಾದ ಜನರಿಗೆ ಆಕ್ಸಿಜನ್ ಆಕ್ಸಿಜನ್ ಬ್ಯಾಂಕ್ ಸರಬರಾಜು ಮಾಡಲು ನಿರ್ಧರಿಸಿದೆ. ಆಕ್ಸಿಜನ್ ಬೇಕಿದ್ರೇ (9888114888) ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.

ಆಕ್ಸಿಜನ್ ಜೊತೆ ದೊಡ್ಡ ಪ್ರಮಾಣದಲ್ಲಿ ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಲಾಗಿದ್ದು, ಬಳ್ಳಾರಿ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿಯ 39 ವಾರ್ಡ್ ನಲ್ಲಿ‌ ವಿತರಣೆ ಮಾಡಲಾಗಿದೆ. 60 ಸಾವಿರ ಆಹಾರ ಧಾನ್ಯ ಮತ್ತು 60ಸಾವಿರ ತರಕಾರಿ ಕಿಟ್ ವಿತರಣೆ.