ಬರಡು ಭೂಮಿಯಲ್ಲಿ ಹಿಮಾಚಲ ಸೇಬು ಬೆಳೆದು ಸೈ ಎನಿಸಿಕೊಂಡ ಕೋಟೆನಾಡಿನ ಕೃಷಿಕ

 ಕೋಟೆನಾಡು ಚಿತ್ರದುರ್ಗ (Chitradurga) ಅಂದ್ರೆ ಎಲ್ರಿಗೂ ನೆನಪಾಗೋದೆ ಅದೊಂದು ಬರದನಾಡು ಅಂತ. ಕೃಷಿಗೆ ಅದೆಷ್ಟು ಬಂಡವಾಳ ಹಾಕಿದ್ರು ಲಾಭ ಸಿಗಲ್ಲ ಅನ್ನೋದು ಅಲ್ಲಿನ ಹಲವು ರೈತರ ಕೂಗು, ಆದ್ರೆ ಅಲ್ಲೋಬ್ಬ ರೈತ ಬಂಜರು ಭೂಮಿಯಲ್ಲಿ ಬಂಗಾರದಂಥ ಹಿಮಾಚಲದ ಸೇಬು (Himachal Apple)ಬೆಳೆದು ಸೈ ಎನಿಸಿಕೊಂಡಿದ್ದಾನೆ.
 

First Published Apr 18, 2022, 4:50 PM IST | Last Updated Apr 18, 2022, 5:51 PM IST

ಚಿತ್ರದುರ್ಗ  (ಏ. 18): ಕೋಟೆನಾಡು ಚಿತ್ರದುರ್ಗ (Chitradurga) ಅಂದ್ರೆ ಎಲ್ರಿಗೂ ನೆನಪಾಗೋದೆ ಅದೊಂದು ಬರದನಾಡು ಅಂತ. ಕೃಷಿಗೆ ಅದೆಷ್ಟು ಬಂಡವಾಳ ಹಾಕಿದ್ರು ಲಾಭ ಸಿಗಲ್ಲ ಅನ್ನೋದು ಅಲ್ಲಿನ ಹಲವು ರೈತರ ಕೂಗು, ಆದ್ರೆ ಅಲ್ಲೋಬ್ಬ ರೈತ ಬಂಜರು ಭೂಮಿಯಲ್ಲಿ ಬಂಗಾರದಂಥ ಹಿಮಾಚಲದ ಸೇಬು (Himachal Apple)ಬೆಳೆದು ಸೈ ಎನಿಸಿಕೊಂಡಿದ್ದಾನೆ.

ಬ್ಲಾನಿ ಡಿಸೋಜರ ಟೆರೇಸ್‌ನಲ್ಲಿ ಕೃಷಿಯ ಅದ್ಭುತ ಲೋಕ!

ಈ ಸೇಬಿನ ತೋಟ ನೋಡಿ, ಇದ್ಯಾವುದೋ ಹಿಮಾಚಲದ್ದೋ ಅಥವಾ ಕಾಶ್ಮಿರದ್ದೋ ಅನ್ಕೋಬೇಡಿ. ಯಾಕಂದ್ರೆ ಇದು ನಮ್ಮದೇ ರಾಜ್ಯದ ಕೋಟೆ ನಾಡು  ಚಿತ್ರದುರ್ಗ (Chitradurga) ತಾಲ್ಲೂಕಿನ ಗೊಡಬನಾಳ್ ಗ್ರಾಮದ ರೈತ ಜ್ಯೋತಿಪ್ರಕಾಶ್ ಜಮೀನಿನದ್ದು. ವಂಶಪಾರಂಪರ್ಯವಾಗಿ ನಮ್ಮ ಪೂರ್ವಜರು ಅಡಿಕೆ ಬೆಳೆಯನ್ನು ನಂಬಿಕೊಂಡು ಬೆಳೆಯುತ್ತಿದ್ದರು. ಆದ್ರೆ ಇತ್ತೀಚೆಗೆ ಪ್ರತಿಯೊಂದು ಭಾಗದಲ್ಲೂ ಅಡಿಕೆ ಬೆಳೆದಿರೋದ್ರಿಂದ ಮುಂದೆ ಅದಕ್ಕೆ ಭವಿಷ್ಯವಿಲ್ಲವೆಂಬ ಉದ್ದೇಶದಿಂದ ತಮ್ಮದೇ ಜಮೀನಿನಲ್ಲಿ ಸೇಬು ಕೃಷಿ ಮಾಡುವ ಮೂಲಕ ಜಿಲ್ಲೆಯ ರೈತರಲ್ಲಿ ಅಚ್ಚರಿ ಮೂಡಿಸಿದ್ದಾರೆ. 

ತಮ್ಮ 4 ಎಕರೆ ಬರಡು ಭೂಮಿಯಲ್ಲಿ ಬಾಳೆ ಮಧ್ಯೆ ಹಿಮಾಚಲ ಮೂಲದ ಪ್ರಸಿದ್ದ ಅರ್ಬನ್, ಡಾರ್ಸೆಟ್ ಗೋಲ್ಡನ್ ಹಾಗೂ ಅನ್ನಾ ತಳಿಗಳು ಮಾತ್ರ ಎಲ್ಲಾ ಪ್ರದೇಶಗಳಲ್ಲೂ ಬೆಳೆದು ನಿಂತಿವೆ.  ಹಳೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ದ ಈ ರೈತರು ಸದ್ದಿಲ್ಲದೆ ಹೊಸ ಪ್ರಯೋಗಕ್ಕೆ ಮುಂದಾದ ಪರಿಣಾಮ ಬರದನಾಡು ಚಿತ್ರದುರ್ಗದಲ್ಲೂ ಸೇಬನ್ನು ಬೆಳೆಯಬಹುದು ಎನ್ನುವ ಹೊಸ ಭರವಸೆ ಮೂಡಿಸಿದ್ದಾರೆ.

ಇನ್ನೂ ಗೊಡಬನಾಳ್ ರೈತನ ಈ ಯಶೋಗಾಥೆಯನ್ನು ಕಂಡಂತಹ ಅನೇಕ ರೈತರು ಉತ್ಪ್ರೇಕ್ಷೆಗೆ ಒಳಗಾಗಿದ್ದಾರೆ. ಬಯಲು ಸೀಮೆಯಲ್ಲಿ ಈ ರೀತಿಯ ಬೆಳೆಗಳನ್ನು ಬೆಳೆಯುವುದು ಕಷ್ಟ ಎಂದುಕೊಂಡು ಸುಮ್ಮನಾಗಿದ್ವಿ, ಆದ್ರೆ ನಮ್ಮವರ ಈ ಸಾಧನೆಯನ್ನು ಕಂಡು ಇಂದು ನಾವು ಸೇಬು ಬೆಳೆಯೋದಕ್ಕೆ ಮುಂದಾಗಿದ್ದೇವೆ. ಸದ್ಯಕ್ಕೆ ಉತ್ತಮ ಬೆಳೆ ಬಂದಿದೆ ಅದ್ರಿಂದ ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ನಮ್ನ ಜಿಲ್ಲೆಯ ರೈತರಲ್ಲಿ ಮನವಿ ಮಾಡ್ಕೊಳ್ಳೋದ್ ಏನಂದ್ರೆ, ಈ ರೀತಿಯ ಬೆಳೆಗಳನ್ನು ನಮ್ಮ ಜಿಲ್ಲೆಯಲ್ಲಿ ಬೆಳಯಲು ನಾವು ಯೋಗ್ಯರಾಗಿದ್ದೀವಿ ನೀವು ಸಹ ಸೇಬು ಬೆಳೆದು ಅನುಕೂಲ ಪಡೆದುಕೊಳ್ಳಿ ಅಂತಾರೆ ರೈತರೊಬ್ಬರು. ಒಟ್ಟಾರೆ  ಬರದನಾಡು ಕೋಟೆನಾಡಿನ ರೈತರು ಹಿಮಾಚಲದ ಸಿಹಿ ಸೇಬನ್ನು ಬೆಳೆದು ಮನಸೊಂದಿದ್ದರೆ ಮಾರ್ಗ ಎಂಬುದನ್ನು ಸಾಧಿಸಿದ್ದಾರೆ. 

Must See