Asianet Suvarna News Asianet Suvarna News

ಕೋಟೆನಾಡು ಚಿತ್ರದುರ್ಗ ಈಗ ಕೊರೋನಾ ಮುಕ್ತ..!

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 40 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಸೂಕ್ತ ಚಿಕಿತ್ಸೆಯ ಬಳಿಕ ಕೊರೋನಾ ಸೋಂಕಿತರೆಲ್ಲರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಕೋಟೆ ನಾಡಿನ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು(ಜೂ.11): ಕೋಟೆ ನಾಡು ಚಿತ್ರದುರ್ಗ ಕೊರೋನಾ ವೈರಸ್‌ನಿಂದ ಸಂಪೂರ್ಣ ಮುಕ್ತವಾಗಿದೆ. ತಬ್ಲೀಘಿಗಳ ನಂಟಿನಿಂದ ತತ್ತರಿಸಿ ಹೋಗಿದ್ದ ಚಿತ್ರದುರ್ಗ, ಜನರ ಸಂಯಮ, ಕೊರೋನಾ ವಾರಿಯಯರ್ಸ್‌ಗಳ ಪರಿಶ್ರಮದಿಂದ ಕೊರೋನಾ ಸೋಂಕು ಮುಕ್ತ ಜಿಲ್ಲೆ ಎನಿಸಿಕೊಂಡಿದೆ.

ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 40 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಸೂಕ್ತ ಚಿಕಿತ್ಸೆಯ ಬಳಿಕ ಕೊರೋನಾ ಸೋಂಕಿತರೆಲ್ಲರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಕೋಟೆ ನಾಡಿನ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಧಾನಿ ನರೆಂದ್ರ ಮೋದಿ ಮುಂದೆ ಮಹಾ ಚಾಲೆಂಜ್..!

ಕೊರೋನಾ ವೈರಸ್ ಮದುವೆಗೂ ಕಂಟಕ ತಂದೊಡ್ಡಿದೆ. ಯಾದಗಿರಿಯಲ್ಲಿ ವದುವಿನ ತಂದೆ ಹಾಗೂ ತಂಗಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಕೊರೋನಾ ಎಕ್ಸ್‌ಪ್ರೆಸ್‌ನಲ್ಲಿವೆ ನೋಡಿ.
 

Video Top Stories