ಚಿಕನ್​ ಪ್ರಿಯರಿಗೆ ಶಾಕ್​, ಕುಕ್ಕುಟೋದ್ಯಮಿಗಳ ಮುಖದಲ್ಲಿ ಮಂದಹಾಸ ತಂದ ಚಿಕನ್ ರೇಟ್!

ಇತ್ತೀಚೆಗೆ ಕುಕ್ಕುಟೋದ್ಯಮವೊಂದು (Poultry) ಬೃಹತ್​ ಉದ್ದಿಮೆಯಾಗಿ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಕೋಳಿ ಫಾರಂಗಳಿದ್ದು ಪ್ರತಿ ಮಾಹೆಯಾನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. 

First Published Mar 25, 2022, 3:40 PM IST | Last Updated Mar 25, 2022, 3:40 PM IST

ಕೋಲಾರ (ಮಾ. 25): ಇತ್ತೀಚೆಗೆ ಕುಕ್ಕುಟೋದ್ಯಮವೊಂದು (Poultry) ಬೃಹತ್​ ಉದ್ದಿಮೆಯಾಗಿ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಕೋಳಿ ಫಾರಂಗಳಿದ್ದು ಪ್ರತಿ ಮಾಹೆಯಾನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. 

ಇಲ್ಲಿ ಎಲ್ಲಾ ವಿಧವಾದ ಕೋಳಿಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ಹೊರ ರಾಜ್ಯಗಳು ಸೇರಿದಂತೆ ಹೊರ ದೇಶಗಳಿಗೂ ಇಲ್ಲಿಂದ ಚಿಕನ್​ ಹಾಗೂ ಮೊಟ್ಟೆಯನ್ನು ರಪ್ತು ಮಾಡಲಾಗುತ್ತಿದೆ. ಇಂಥ ಉದ್ಯಮ ಕಳೆದ ಮೂರು ನಾಲ್ಕು ತಿಂಗಳಿಂದ ಕೊರೊನಾ ಲಾಕ್​ಡೌನ್​ ಭಯದಲ್ಲಿ ಕೋಳಿ ಉತ್ಪಾದನೆಯೇ ಕಡಿಮೆಯಾಗಿತ್ತು. 

ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹಾಕಿ, ಕಾರ್ಯಕ್ರಮಗಳು, ಜಾತ್ರೆ, ಹಬ್ಬ ಹರಿದಿನಗಳಿಗೂ ನಿರ್ಬಂಧ ಹಾಕಿದರ ಪರಿಣಾಮ ಕೋಳಿ ಉತ್ಪಾದನೆ ಜೊತೆಗೆ ಬೇಡಿಕೆಯೂ ಕಡಿಮೆಯಾಗಿತ್ತು, ಅದರೆ ಈಗ ಲಾಕ್ ಡೌನ್​ ತೆರವಾದ ನಂತರ ಎಲ್ಲವೂ ಮಾಮೂಲಿನಂತೆ ನಡೆಯಲು ಆರಂಭಿಸಿದರ ಪರಿಣಾಮ ಮತ್ತೆ ಚಿಕನ್​ ಬೆಲೆ ಏರಿಕೆ ಕಂಡಿದೆ. ಇದು ಕೋಳಿ ಉದ್ಯಮಿಗಳಿಗೆ ಒಂದು ರೀತಿಯ ಸಂತಸದ ವಿಚಾರ ಜೊತೆಗೆ ಸಂಕಷ್ಟದ ದಿನಗಳು ಕೂಡಾ! ಯಾಕಂದ್ರೆ ಇವತ್ತಿನ ಬೆಲೆ ಏರಿಕೆ ನಡುವೆ ಬೆಲೆ ಹೆಚ್ಚಾದರೂ ಅಷ್ಟೇನು ಸಂತೋಷ ಪಡುವಂತಿಲ್ಲ ಅನ್ನೋದು ಉದ್ಯಮದಾರರ ಮಾತು.

ಇನ್ನು ಕೋಳಿ ಸಾಕಾಣಿಕೆದಾರರೂ ಕೊರೋನಾ ಕಾಲದಲ್ಲಿ ಕೋಳಿ ಉದ್ಯಮ ನೆಲಕಚ್ಚಿ ಹೋಗಿತ್ತು, ಉದ್ಯಮ ನಂಬಿದ್ದವರು ಇನ್ನೇನು ನಮ್ಮ ಕಥೆ ಮುಗಿದೇ ಹೊಯ್ತು ಎನ್ನವಷ್ಟರ ಮಟ್ಟಿಗೆ ಕುಕ್ಕುಟೋದ್ಯಮ ನೆಲಕಚ್ಚಿತ್ತು. ಆದ್ರೆ ಕೊರೊನಾ ಮೂರನೇ ಅಲೆ ಅಷ್ಟೇನು ಪರಿಣಾಮ ಬೀರದ ಪರಿಣಾಮ ಕೆಲವೇ ದಿನಗಳಲ್ಲಿ ಮತ್ತೆ ಪುಟಿದೆದ್ದು ನಿಂತಿರುವ ಕುಕ್ಕುಟೋದ್ಯಮ ಈಗ ದಾಖಲೆ ಬರೆಯಲು ನಿಂತಿದೆ. ಒಂದು ಕೆಜಿ ಚಿಕನ್​ ಬೆಲೆ ಈಗ 200 ರಿಂದ 220 ರೂಪಾಯಿಗೆ ಏರಿಕೆಯಾಗಿದ್ರೆ, ಮೊಟ್ಟೆ ಬೆಲೆ ಕೂಡ 5 ರೂಪಾಯಿಗೆ ಏರಿಕೆಯಾಗಿದೆ. ಇದು ಉದ್ಯಮ ನಂಬಿದವರಲ್ಲಿ ಸಂತಸ ತಂದಿದೆ. ಆದರೆ ಚಿಕನ್​ ಹಾಗೂ ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆ ಶಾಕ್​ ಶುರುವಾಗಿದೆ. ಸದ್ಯ ಮಾರುಟಕ್ಟೆಯಲ್ಲಿ ತರಕಾರಿ ಬೆಲೆಯ ಜೊತೆಗೆ ಕೆಂಪು ತರಕಾರಿ ಬೆಲೆ ಕೂಡಾ ಏರಿಕೆಯಾಗಿರೋದು ಗ್ರಾಹಕರಿಗೆ ಹೊರೆಯಾಗುತ್ತಿದೆ.

ಒಟ್ಟಾರೆ  ಕೊರೋನಾದಿಂದ ನೆಲಕಚ್ಚಿದ್ದ ಕುಕ್ಕುಟೋದ್ಯಮ, ಈಗ ಕೊರೋನಾ  ನಂತರದಲ್ಲಿ ಮತ್ತೆ ಮೇಲೆದ್ದು ನಿಂತಿದೆ. ಈ ಮೂಲಕ ನೆಲಕಚ್ಚಿ ನಷ್ಟ ಅನುಭಿವಿಸಿದ್ದ ಉದ್ಯಮಿಗಳಿಗೆ ಈಗ ಒಂದಷ್ಟು ಹಣ ಮಾಡಲು ದಾರಿಯಾಗಿದೆ. ಆದರೆ ಬಹುತೇಕ ಕೋಳಿ ಉತ್ಪಾದನೆ ಕಡಿಮೆಯಾಗಿದ್ದು ಈ ಬೆಲೆ ಕೂಡಾ ಅದೃಷ್ಟವಿದ್ದವರಿಗೆ ಮಾತ್ರ ಸಿಗುತ್ತಿದೆ ಅನ್ನೋದು ಬೇಸರದ ಸಂಗತಿ..