ಕೋಲಾರ: ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಕ್ಕಳಲ್ಲಿ ಒಂದಿಲ್ಲೊಂದು ಖಾಯಿಲೆ ಕಾಣಿಸಿಕೊಳ್ಳುವ ಮೂಲಕ ಚಿತ್ರ ಹಿಂಸೆ ಕೊಡ್ತಿದೆ. ಜ್ವರ,ಕೆಮ್ಮು, ನೆಗಡಿ, ಸುಸ್ತು ಮಕ್ಕಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.
ಕೋಲಾರ (ಅ. 11): ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಕ್ಕಳಲ್ಲಿ ಒಂದಿಲ್ಲೊಂದು ಖಾಯಿಲೆ ಕಾಣಿಸಿಕೊಳ್ಳುವ ಮೂಲಕ ಚಿತ್ರ ಹಿಂಸೆ ಕೊಡ್ತಿದೆ. ಜ್ವರ,ಕೆಮ್ಮು, ನೆಗಡಿ, ಸುಸ್ತು ಮಕ್ಕಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ತಿದ್ದು ಆಸ್ಪತ್ರೆಗಳ ಮುಂದೆ ಪೋಷಕರು ಪಡಬಾರದ ಕಷ್ಟ ಪಡ್ತಿದ್ದಾರೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ಅಂತೂ ಹೆಚ್ಚಿನ ಮಕ್ಕಳಲ್ಲಿ ಈ ಎಲ್ಲಾ ರೋಗಗಳು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು ಆಸ್ಪತ್ರೆಗಳ ಮುಂದೆ ಜಾತ್ರೆಯ ರೀತಿ ಪೋಷಕರು ಸೇರ್ತಿದ್ದಾರೆ.. ವೈದ್ಯರಿಗೂ ಚಿಕಿತ್ಸೆ ಕೊಡಲು ಸಮಯದ ಅಭಾವ ಎದುರಾಗಿದೆ.