ಪ್ರೇಯಸಿ ಕೊಂದು ಎರಡು ದಿನ ಪಕ್ಕದಲ್ಲೇ ಮಲಗಿದ್ದ: ಅಸ್ಸಾಮಿ ಸುಂದರಿಯನ್ನ ಬರ್ಬರವಾಗಿ ಹತ್ಯೆಗೈದಿದ್ದೇಕೆ?

ಕಷ್ಟದಿಂದಲೇ ಬದುಕು ಕಟ್ಟಿಕೊಂಡು ಬಂದಿದ್ದ ಆರವ್​​​ಗೆ ಮಾಯಾ ಪ್ರೀತಿ ಹೊಸ ಹುರುಪನ್ನು ಕೊಟ್ಟಿತ್ತು. ಆದ್ರೆ ಆಕೆ ದೂರವಾಗ್ತಾಳೆ ಅನ್ನೋ ನೋವನ್ನು ಈತನಿಂದ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ಕಾರಣಕ್ಕೆ ಮಾಯಾಳನ್ನು ಕೊಂದು ಮುಗಿಸಿದ. ಬಾಳಿ ಬದುಕಬೇಕಿದ್ದ ಎರಡು ಜೀವಗಳು ಅವು. ಆದ್ರೆ ಮಾಯ ಹೆಣವಾದ್ರೆ ಆತ ಜೈಲು ಸೇರಿದ್ದಾನೆ. 

First Published Dec 1, 2024, 10:47 AM IST | Last Updated Dec 1, 2024, 10:47 AM IST

ಬೆಂಗಳೂರು(ಡಿ.01):  ಅವಳು ದೂರದ ಅಸ್ಸಾಂನವಳು.. ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲೇ ಕೆಲಸ ಗಿಟ್ಟಿಸಿಕೊಂಡು ತನ್ನ ಪಾಡಿಗೆ ತಾನು ಇದ್ದಳು.. ಆದರೆ ಆವತ್ತು ಅದೇ ಯುವತಿ ಇಂದಿರಾನಗರದ ಸರ್ವೀಸ್​​ ಅಪಾರ್ಟ್​ಮೆಂಟ್​​ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಳು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಎಸ್ಕೇಪ್​ ಆಗಿದ್ದ.. ಇನ್ನೂ ಇದೇ ಸುಂದರಿಯ ಕೊಲೆ ಕೇಸ್​ನ ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಆತ ಹೇಳಿದ ಒಂದೊಂದು ಮಾತು ಪೊಲೀಸರನ್ನೇ ಥಂಡಾ ಹೊಡೆಸಿದೆ.. ಅಷ್ಟಕ್ಕೂ ಅಲ್ಲಿ ಕೊಲೆಯಾದವಳು ಯಾರು..? ಕೊಲೆಗಾರ ಯಾರು..? ಯಾಕಾಗಿ ಕೊಲೆ ಮಾಡಿದ..? ಒಬ್ಬ ಸುಂದರ ಯುವತಿಯ ಮರ್ಡರ್​​ ಮಿಸ್ಟರಿಯೇ ಇವತ್ತಿನ ಎಫ್​​.ಐ.ಆರ್

ಯಸ್​​.. ಸರ್ವೀಸ್​​ ಅಪಾರ್ಟ್​ಮೆಂಟ್​​ಗೆ ಬಾಯ್​ಫ್ರೆಂಡ್​​ ಜೊತೆ ಖುಷಿ ಖುಷಿಯಾಗಿ ಬಂದ ಮಾಯಾ ಆತನಿಂದಲೇ ಹೆಣವಾಗಿಬಿಟ್ಟಿದ್ದಳು.. ಇನ್ನೂ ಆಕೆಯನ್ನ ಕೊಲೆ ಮಾಡಿ ಎಸ್ಕೇಪ್​ ಆಗಿದ್ದ ಆರವ್​​​​​ ನಾಲಕ್ಕು ದಿನಗಳ ನಂತರ ಅರೆಸ್ಟ್​ ಆದ.. ಆತನನ್ನ ವಿಚಾರಣೆ ಮಾಡಿದಾಗ ಆತನ ಕಥೆ ಕೇಳಿ ಪೊಲೀಸರು ಒಂದು ಕ್ಷಣ ಶಾಕ್​​ ಆಗಿದ್ರು.. ಹಾಗಾದ್ರೆ ಆರವ್​ ಪ್ರೀತಿಸಿದವಳನ್ನೇ ಕೊಂದಿದ್ದೇಕೆ..?. 

20 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!

ಆತ 5 ತಿಂಗಳಿಗೇ ತಂದೆಯನ್ನ ಕಳೆದುಕೊಂಡ.. ತಾಯಿ ಗಂಡ ಸತ್ತ ಒಂದೇ ವರ್ಷದಲ್ಲಿ ಎರಡನೇ ಮದುವೆಯಾದಳು... ಪ್ರೀತಿಯ ಹುಡುಕಾಟದಲ್ಲೇ ಆರವ್​​ ಬೆಳೆದಿದ್ದ.. ಪರಿಸ್ಥಿತಿ ಹೀಗಿರುವಾಗ್ಲೇ ವರ್ಷಗಳ ಹಿಂದೆ ತಾಯಿ ಎರಡನೇ ಗಂಡನಿಗೂ ಸೋಡ ಚೀಟಿ ಕೊಟ್ಟು ಮೂರನೇ ಮದುವೆಯಾದಳು.. ಅಷ್ಟೇ ಅಲ್ಲ ಎದೆ ಎತ್ತರಕ್ಕೆ ಬೆಳೆದ ಮಗನ್ನಿದ್ರೂ ಮತ್ತೊಂದು ಮಗು ಮಾಡಿಕೊಂಡಳು.. ಇದು ಆರವ್​​ನ ಕುಗ್ಗಿಸಿಬಿಟ್ಟಿತ್ತು.. ಹೀಗಿರುವಾಗ್ಲೇ ಈತನಿಗೆ ಸಿಕ್ಕಿದ್ದು ಮಾಯಾ.. ಅವಳು ಇವನ ಲೈಫ್​​ಗೆ ಬಂದ ಮೇಲೆ ಈತ ಖುಷಿ ಖುಷಿಯಾಗಿದ್ದ.. ಆದ್ರೆ ಮೊನ್ನೆ ಸರ್ವೀಸ್​​ ಅಪಾರ್ಟ್​ಮೆಂಟ್​​ಗೆ ಹೋದಾಗ ಅವಳ ಮೊಬೈಲ್​ಗೆ ಬಂದಿದ್ದ ಮೆಸೆಜ್​ಗಳು ಆರವ್​ನ ತಲೆಕಡಸುವಂತೆ ಮಾಡಿತ್ತು.. ತಾನು ಪ್ರೀತಿಸಿದವರೆಲ್ಲಾ ನನಗೆ ಮೋಸ ಮಅಡಿದ್ರಲ್ಲಾ ಅನ್ನೋ ಸಿಟ್ಟಿನಲ್ಲಿ  ಅವಳನ್ನೇ ಮುಗಿಸೋದಕ್ಕೇ ನಿರ್ಧರಿಸಿಬಿಟ್ಟ.

ಕಷ್ಟದಿಂದಲೇ ಬದುಕು ಕಟ್ಟಿಕೊಂಡು ಬಂದಿದ್ದ ಆರವ್​​​ಗೆ ಮಾಯಾ ಪ್ರೀತಿ ಹೊಸ ಹುರುಪನ್ನು ಕೊಟ್ಟಿತ್ತು. ಆದ್ರೆ ಆಕೆ ದೂರವಾಗ್ತಾಳೆ ಅನ್ನೋ ನೋವನ್ನು ಈತನಿಂದ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ಕಾರಣಕ್ಕೆ ಮಾಯಾಳನ್ನು ಕೊಂದು ಮುಗಿಸಿದ. ಬಾಳಿ ಬದುಕಬೇಕಿದ್ದ ಎರಡು ಜೀವಗಳು ಅವು. ಆದ್ರೆ ಮಾಯ ಹೆಣವಾದ್ರೆ ಆತ ಜೈಲು ಸೇರಿದ್ದಾನೆ.