BIG 3 ಕಣ್ಣು ಕಾಣದ ತಾಯಿಗೆ ಮಗಳೇ ಆಸೆರೆ: ಪ್ರತಿಭಾವಂತ ವಿದ್ಯಾರ್ಥಿನಿಗೆ ಬೇಕಿದೆ ಸಹಾಯಹಸ್ತ
ತನ್ನ ಬದುಕು ಕತ್ತಲಾಗಿದ್ರೂ, ಮಗಳ ಬದುಕಿಗೆ ಬೆಳಕು ನೀಡಬೇಕು ಅನ್ನೋ ಹಂಬಲದಲ್ಲಿ ತಾಯಿ ನಿತ್ಯ ಪರದಾಡ್ತಾ ಇದ್ದಾಳೆ. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾರಸಂದ್ರ ಗ್ರಾಮದಲ್ಲಿ ವಿದ್ಯಾರ್ಥಿನಿ ಅಮೃತಾ ಹಾಗೂ ಅವರ ತಾಯಿ ಹೇಮಾವತಿ ಪ್ರತಿದಿನ ನರಕಯಾತನೆ ಪಡ್ತಿದ್ದಾರೆ. 50 ವರ್ಷದ ಹೇಮಾವತಿಗೆ ಎರಡೂ ಕಣ್ಣು ಕಾಣಿಸಲ್ಲ. ಈಕೆಯ ಮಗಳು ಅಮೃತಾ ಓದಿನಲ್ಲಿ ಸದಾ ಮುಂದಿದ್ದಾಳೆ. ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಅಮೃತಾ ತನಗಿರುವ ಓದಿನ ಆಸಕ್ತಿಯಿಂದ ಪ್ರಥಮ ದರ್ಜೆಯಲ್ಲೇ ಪಾಸಾಗಿದ್ದಾಳೆ. ಸರ್ಕಾರದಿಂದ ಬರುವ ಪ್ರತಿ ತಿಂಗಳ 1,400 ರೂ. ಪಿಂಚಣಿ ಹಾಗೂ ರೇಷನ್'ನಿಂದ ದಿನ ದೂಡುತ್ತಿದೆ ಈ ಕುಟುಂಬ. ಇದೀಗ ತಾಯಿ ಮಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಇದೀಗ ಮಗಳ ವಿದ್ಯಾಭ್ಯಾಸಕ್ಕೆ ಫೀಸ್ ಕಟ್ಟೊದಕ್ಕೂ ಪರದಾಡ್ತಿದ್ದಾರೆ. ಬಿಗ್-3 ಇವರ ಬೆನ್ನಿಗೆ ನಿಂತಿದೆ ಬಡತನದ ಪ್ರತಿಭೆಗೆ ಬದುಕು ಕಟ್ಟಿ ಕೊಡಲು ಜೊತೆಯಾಗಿ ನಿಂತಿದೆ.