ಸರ್ಕಾರ ವರ ಕೊಟ್ಟರೂ ಅಧಿಕಾರಿ ಕೊಡ್ತಿಲ್ಲ: ಸಿಇಓ ಸಂಗಪ್ಪ ಎಲ್ಲಿದ್ದೀರಾ ?
ವಿಶೇಷ ಆಶ್ರಯ ಯೋಜನೆ ಅಡಿಯಲ್ಲಿ 2010ರಲ್ಲಿ ಶ್ರೀ ಮಾರುತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ಸರ್ಕಾರ 5 ಎಕರೆ ಜಾಗ ನೀಡಿದ್ರು, ಅಧಿಕಾರಿಗಳು ಮಾತ್ರ ಮಂಜೂರು ಮಾಡಿಲ್ಲ.
ದೇವರು ವರ ಕೊಟ್ರು ಪೂಜಾರಿ ವರ ಕೊಡೋದಿಲ್ಲ ಅನ್ನೋ ಗಾದೆ ಮಾತು ಅಕ್ಷರಶಃ ಇವರ ಜೀವನದಲ್ಲಿ ನಿಜವಾಗಿದೆ. ವಿಶೇಷ ಆಶ್ರಯ ಯೋಜನೆ ಅಡಿಯಲ್ಲಿ 2010ರಲ್ಲಿ ಶ್ರೀ ಮಾರುತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ಸರ್ಕಾರ 5 ಎಕರೆ ಜಾಗವನ್ನು ಕೆಂಗೇರಿ ಹೋಬಳಿ ಚೆಲ್ಲಘಟ್ಟ ಗ್ರಾಮ ಸರ್ವೆ ನಂ 13 ರಲ್ಲಿ ಜಾಗ ಮಂಜೂರಿ ಮಾಡಿ ಆದೇಶ ಹೊರಡಿಸಿದೆ. 2017 ರಲ್ಲಿ ಕಂದಾಯ ಇಲಾಖೆಯಿಂದ ಬೆಂಗಳೂರು ದಕ್ಷಿಣ ತಾಲೂಕು ಪಂಚಾಯತಿಗೆ ಹಸ್ತಾಂತರ ಮಾಡಲಾಗಿದೆ. 2017 ರಲ್ಲಿ ಲೇಔಟ್ ಪ್ಲಾನ್ ಅಪ್ರೂವಲ್ ಮಾಡಿ 2020 ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 6 ಲಕ್ಷ 90 ಸಾವಿರ ಹಣವನ್ನ ಬಿಡುಗಡೆ ಮಾಡಿ ಬಡಾವಣೆ ನಿರ್ಮಾಣ ಲೇಔಟ್ ಕಾರ್ಯ ಕೂಡ ಮುಗಿದಿದೆ. 2021 ರಲ್ಲಿ 134 ಜನರಿಗೆ 20*20 ಅಳತೆಯ ಸೈಟ್ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿದೆ.
ಆದ್ರೆ ಜಿಲ್ಲಾ ಪಂಚಾಯತ್ ಸಿಇಒ ಸಂಗಪ್ಪ ತಕರಾರು ತೆಗೆದಿದ್ದಾರೆ. ವಿಶೇಷಚೇತನರ ಬಳಿ 10 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟು ಫೈಲ್ ಗೆ ಸಹಿ ಹಾಕದೇ ಮುಂದಕ್ಕೆ ಹಾಕುತ್ತಿದ್ದಾರೆ. ಇದರಿಂದ ಬೇಸತ್ತು ವಿಕಲಾಂಗ ಚೇತನರು ಕಣ್ಣೀರು ಹಾಕಿದ್ದಾರೆ. ಒಟ್ಟು 134 ವಿಶೇಷಚೇತನರು ಸೈಟ್ ಮಂಜೂರು ಮಾಡಲಾಗಿದೆ. ಆದ್ರೆ ಬೆಂಗಳೂರು ದಕ್ಷಿಣ ತಾಲೂಕು ಸಿಇಒ ಸಂಗಪ್ಪ ಬೇಕಂತಲೇ ವಿಶೇಷಚೇತನರಿಗೆ ಹಕ್ಕು ಪತ್ರ ಕೊಡದೆ ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿ ದಯಾನಂದ್ ಸೈಟ್ ಹಂಚಿಕೆ ಮಾಡುವಂತೆ ಅನುಮೋದನೆ ಮಾಡಿ ಕಳುಹಿಸಿದ್ರು , ಸಂಗಪ್ಪ ಫೈಲ್ ತಡೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟಿರೋದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಕೂಡಲೇ ಇದಕ್ಕೆ ಸಂಬಂಧ ಪಟ್ಟ ಸಚಿವರು 134 ವಿಶೇಷಚೇತನರಿಗೆ ನ್ಯಾಯ ದೊರಕಿಸಿಕೊಡುವಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕಳಕಳಿಯ ಮನವಿ.
ಇದನ್ನೂ ವೀಕ್ಷಿಸಿ: ಸರ್ಕಾರ ಕೊಟ್ರೂ ಅಧಿಕಾರಿಗಳ ನೌಟಂಕಿ: ಆದೇಶ ಹೊರಡಿಸಿ 10 ವರ್ಷವಾದ್ರೂ ಸಿಗದ ಹಕ್ಕುಪತ್ರ !