Asianet Suvarna News Asianet Suvarna News

BIG 3 Impact:ಹಿರಿಯೂರು ನೂತನ ನಗರಸಭೆ ಕಟ್ಟಡ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ನೂತನ ನಗರಸಭೆ ಕಟ್ಟಡ ಕೊನೆಗೂ ಉದ್ಘಾಟನೆಯಾಗಿದೆ. ಇದು ಬಿಗ್3 ವರದಿಯ ಇಂಪ್ಯಾಕ್ಟ್.
 

ಕಳೆದ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಸುಮಾರು 3.5 ಕೋಟಿ ಖರ್ಚು ಮಾಡಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಗರಸಭೆ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಹೈಫೈ ಕಟ್ಟಡ ಕಟ್ಟಿದ್ರು ಹಳೇ ಕಟ್ಟದಲ್ಲಿಯೇ ಕೆಲಸ ಮಾಡ್ತಿದ್ರು. ಜನಪ್ರತಿನಿಧಿಗಳ ಕ್ರೆಡಿಟ್ ವಾರ್'ಗೆ ಕೋಟಿಗಟ್ಟಲೇ ವೆಚ್ಚದಲ್ಲಿ ಕಟ್ಟಿಸಿದ ಭವ್ಯ ಕಟ್ಟಡ ಮಾತ್ರ ಧೂಳು ಹಿಡಿಯುತ್ತಿತ್ತು. ಸ್ಥಳೀಯ  ಶಾಸಕರಾದ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್, ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಜನಪ್ರತಿನಿಧಿಗಳ ನಡುವಿನ ಕ್ರೆಡಿಟ್ ವಾರ್'ಗೆ ಸಿಲುಕಿ ಭವ್ಯ ಕಟ್ಟಡ ಉದ್ಘಾಟನಾ ಆಗಿರಲಿಲ್ಲ. ಈ ಬಗ್ಗೆ ಬಿಗ್3ಯಲ್ಲಿ ಫುಲ್ ಗರಂ ಆಗಿಯೇ ವರದಿ ಪ್ರಸಾರ ಮಾಡಿದ್ವಿ. ಇನ್ನು ವರದಿ ಪ್ರಸಾರ ಆಗ್ತಿದ್ದಂತೆ ಸ್ಥಳೀಯ ಶಾಸಕಿ ಸೇರಿದಂತೆ ಎಲ್ರೂ ಎಚ್ಚೆತ್ತುಕೊಂಡರು. ಅಕ್ಟೋಬರ್ 31ರಂದು ಸುದ್ದಿ ಬಿತ್ತರಿಸಿದ್ದ ವೇಳೆ ಮಾತನಾಡಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶೀಘ್ರವೇ ಉದ್ಘಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ರು.  ನವೆಂಬರ್ 22ರಂದು ಸಿಎಂ ಬೊಮ್ಮಾಯಿ ನೂತನ ನಗರಸಭೆ ಕಟ್ಟಡ ಉದ್ಘಾಟನೆ ಮಾಡಿದ್ದಾರೆ.