ಬೀದರ್‌ನಲ್ಲಿ ಕೊರೋನಾ ಅಬ್ಬರ ಇಳಿಕೆ: ಕೇಸ್‌ ಸಂಪೂರ್ಣ ಇಳಿಕೆ, ನಿಟ್ಟುಸಿರು ಬಿಟ್ಟ ಜನ

* ಪ್ರತಿನಿತ್ಯ 10 ಕ್ಕಿಂತ ಕಡಿಮೆ ಕೋವಿಡ್‌ ಪ್ರಕರಣಗಳು ಪತ್ತೆ
* ಬೀದರ್‌ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‌ ಗಣನೀಯವಾಗಿ ಇಳಿಕೆ
* ರಾಜ್ಯದಲ್ಲೇ ಅತ್ಯಂತ ಕಡಿಮೆ ಪಾಸಿಟಿವಿಟಿ ರೇಟ್‌ ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದ ಬೀದರ್‌
 

First Published Jun 7, 2021, 10:40 AM IST | Last Updated Jun 7, 2021, 10:40 AM IST

ಬೀದರ್‌(ಜೂ.07): ಜಿಲ್ಲೆಯಲ್ಲಿ ಕೊರೋನಾ ಅಬ್ಬರ ದಿನೇ ದಿನೆ ಕಡಿಮೆಯಾಗುತ್ತಿದೆ. ಪ್ರತಿದಿನ 400 ರಿಂದ 500 ಕೇಸ್‌ಗಳು ಪತ್ತೆಯಾಗುತ್ತಿದ್ದವು. ಅದ್ರೆ ಇದೀಗ ಪ್ರತಿನಿತ್ಯ 10 ಕ್ಕಿಂತ ಕಡಿಮೆ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗುತ್ತಿದೆ. ಇದರಿಂದ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‌ ಗಣನೀಯವಾಗಿ ಇಳಿಕೆಯಾಗಿದೆ. ಹೌದು, 0.08 ರಷ್ಟು ಪಾಸಿಟಿವಿಟಿ ರೇಟ್‌ ದಾಖಲಾಗಿದೆ. ಇದು ರಾಜ್ಯದಲ್ಲೇ ಅತ್ಯಂತ ಕಡಿಮೆ ಪಾಸಿಟಿವಿಟಿ ರೇಟ್‌ ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ.

ಪಾಸಿಟಿವಿಟಿ ದರ ಇಳಿಕೆ, ಜೂ. 14 ಕ್ಕೂ ಮುನ್ನವೇ ರಾಜ್ಯದಲ್ಲಿ ಅನ್‌ಲಾಕ್‌..?