BIG 3: ಬೆಂಗಳೂರಿಗರೇ ಅಲರ್ಟ್: ಈ ಜಾಗದಲ್ಲಿ ಓಡಾಡೋಕೆ ಗಟ್ಟಿ ಗುಂಡಿಗೆ ಬೇಕು
ಬೆಂಗಳೂರಿನ ಶಿವನಗರ ಜಂಕ್ಷನ್ ಪ್ಲೈ ಓವರ್ ಕುಸಿಯುತ್ತಿದೆ. ಈ ಕುರಿತು ಬಿಬಿಎಂಪಿಗೆ ದೂರು ನೀಡಿದ್ರೂ ಕ್ಯಾರೇ ಎನ್ನುತ್ತಿಲ್ಲವಂತೆ.
ಬೆಂಗಳೂರಿನಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ವೆಸ್ಟಾಫ್ ಕಾರ್ಡ್ ರಸ್ತೆಯ ಶಿವನಗರ ಜಂಕ್ಷನ್ ಬಳಿ ಇರುವ ಫ್ಲೈ ಓವರ್ ಉದ್ಘಾಟನೆ ಆಯ್ತು. ಸುಮಾರು 60 ರಿಂದ 100ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದಂತಹ ಫ್ಲೈ ಓವರ್ ಇದು. ಒಂದೂವರೆ ಕಿ.ಮೀ ಮೇಲ್ಸೇತುವೆ ಮೂರು ವರ್ಷ ಕುಂಟುತ್ತಾ ಸಾಗಿತ್ತು. ಇದೀಗ ಕಳೆ ಒಂದೂವರೆ ವರ್ಷದಿಂದ ಹೊಸದಾಗಿ ನಿರ್ಮಾಣ ಆದ ಫ್ಲೈ ಓವರ್ ಸಂಚಾರಕ್ಕೆ ಯೋಗ್ಯವೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.