Asianet Suvarna News Asianet Suvarna News

ಫೀಲ್ಡ್‌ಗೆ ಇಳಿದ ರವಿ ಚೆನ್ನಣ್ಣನವರ್: ಹೊಲಗಳಲ್ಲಿ ಭರ್ಜರಿ ಕಾರ್ಯಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿರುವ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಫೀಲ್ಡ್ ಗೆ ಇಳಿದಿದಿದ್ದು,  ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾಯಾ೯ಚರಣೆ ಮಾಡಿಸಿದರು. 

ಬೆಂಗಳೂರು, [ಆ.17]: ರೌಡಿಗಳನ್ನು ಮಟ್ಟಹಾಕಲು ಓಣಿ-ಓಣಿಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿ ಹೊಲಗಳಲ್ಲಿ ಫೀಲ್ಡ್ ಗೆ ಇಳಿದಿದ್ದು, ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾಯಾ೯ಚರಣೆ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿ ಹೋಬಳಿಯ ,ಬೈಲನರಸಾಪುರ, ಬಂಡಹಳ್ಳಿ , ಎನ್. ಹೊಸಹಳ್ಳಿ ಹಾಗೂ ಗೆದ್ದಲಹಳ್ಳಿಪುರ ಗ್ರಾಮಗಳಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ಬಗ್ಗೆ ಖಚಿತ ಮಾಹಿತಿಯೊಂದಿಗೆ ರವಿ ಡಿ. ಚೆನ್ನಣ್ಣನವರ್  ದಾಳಿ ನಡೆಸಿ, 30ಕ್ಕೂ ಹೆಚ್ಚು ಕ್ಯಾಟ್ ಫಿಶ್ ಹೊಂಡಗಳನ್ನು ಜೆಸಿಬಿ ಮೂಲಕ ಮುಚ್ಚಿಸಿದರು.