Asianet Suvarna News Asianet Suvarna News

ದೇವಿಯ ವಿಗ್ರಹಕ್ಕೆ ಅಂಟಿಸಿದ್ದ ಕೃತಕ ಕಣ್ಣನ್ನು ಪೂಜಾರಿಯಿಂದಲೇ ತೆಗೆಸಿದ ದಿಟ್ಟ ತಹಶೀಲ್ದಾರ್.!

Jun 30, 2021, 3:52 PM IST

ಬೆಳಗಾವಿ (ಜೂ. 30): ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಮೂರ್ತಿಗೆ ಕೃತಕ ಕಣ್ಣು ಅಂಟಿಸಿ ಕಿಡಿಗೇಡಿಗಳು ಜನರನ್ನು ನಂಬಿಸಿದ್ದರು. ಈ ಪವಾಡವನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ಧಾರೆ. ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ತಹಸೀಲ್ದಾರ್, ಪೂಜಾರಿಯಿಂದ ಕೃತಕ ಕಣ್ಣನ್ನು ತೆಗೆಸಿದ್ದಾರೆ. ಹೀಗೆಲ್ಲಾ ಜನರನ್ನು ನಂಬಿಸಿ ಮೌಢ್ಯಕ್ಕೆ ತಳ್ಳಿದರೆ ಕೇಸ್ ಹಾಕುವುದಾಗಿ ಎಚ್ಚರಿಸಿದ್ದಾರೆ.