ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ: ಬಿಬಿಎಂಪಿ ಕಾಲೇಜಿನಲ್ಲಿ ಅಂಧ ದರ್ಬಾರ್
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಶುಲ್ಕ ವಸೂಲಿ ದಂಧೆ ಜೋರಾಗಿ ನಡೆದಿದ್ದು, ಕಾಲೇಜು ಶುಲ್ಕಕಿಂತ ಹೆಚ್ಚಿನ ಹಣವನ್ನು ಪ್ರಿನ್ಸಿಪಾಲರು ಕೇಳುತ್ತಿದ್ದಾರೆ.
ಬೆಂಗಳೂರು: ಬಿಬಿಎಂಪಿ ಕಾಲೇಜಿನಲ್ಲಿ ಶುಲ್ಕ ವಸೂಲಿ ದಂಧೆ ಶುರುವಾಗಿದೆ. ಆಸ್ಟಿನ್ ಟೌನ್ ಸರ್ಕಾರಿ ಕಾಲೇಜಿನಲ್ಲಿ ಅಂಧ ದರ್ಬಾರ ನಡೆದಿದ್ದು, 2,500 ಪಡೆದು 600 ರೂ. ರಶೀದಿ ನೀಡುತ್ತಿದೆ ಆಡಳಿತ ಮಂಡಳಿ. 2022-23ನೇ ಸಾಲಿನಿಂದಲೇ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ರೀತಿ ಬೇಕಾಬಿಟ್ಟಿ ಸುಲಿಗೆ ಮಾಡುತ್ತಿದ್ದರು ಬಿಬಿಎಂಪಿ ಕಣ್ಣಿಗೆ ಕಾಣುತ್ತಿಲ್ಲ. ಈ ಕುರಿತು ಪ್ರಿನ್ಸಿಪಾಲ್ ನರಸಿಂಹ ಮೂರ್ತಿಯನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಅದಲ್ಲದೇ ಇಲ್ಲಿ ನೀರು ಬರಲ್ಲ , ಸೆಕ್ರೆಟರಿ ಚೆನ್ನಾಗಿ ಇಲ್ಲ , ಊಟ ಚೆನ್ನಾಗಿ ಕೊಡುತ್ತಿಲ್ಲ. ಜನರಲ್‌ಗೆ 2,500 ಹಾಗೂ ಎಸ್ಸಿ ಅವರಿಗೆ 2000 ತಗೊಂಡು ದಂಧೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಬೇಕು ಎಂದು ಪೋಷಕರು ಕೇಳುತ್ತಿದ್ದಾರೆ.