ಪ್ರಾಣ ಭಿಕ್ಷೆ ಬೇಡಿದ್ರೂ ರಕ್ಷಿಸಲಿಲ್ಲ ಪೊಲೀಸರು ?: ಹೊಯ್ಸಳ ವಾಹನ ಅವರಿಗೆ ಕೊಟ್ಟಿರೋದು ಯಾಕೆ?
ಆಟೋ ಚಾಲಕನೊಬ್ಬ ಗಾಯಗೊಂಡು ಒದ್ದಾಡುತ್ತಿದ್ದರು, ಹೊಯ್ಸಳ ಪೊಲೀಸರು ಕಂಡರೂ ಕಾಣದಂತೆ ತೆರಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರ ಬಳಿ ವ್ಯಕ್ತಿಯೊಬ್ಬ ಪ್ರಾಣ ಭಿಕ್ಷೆ ಕೇಳಿದ್ರೂ, ಮಾನವೀಯತೆ ತೊರದೆ ಆತನ ಸಾವಿಗೆ ಕಾರಣವಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ (Mahalakshmi Layout) ಹೊಯ್ಸಳ ಬೀಟ್ ಪೊಲೀಸರು ನಿರ್ಲಕ್ಷ್ಯ ತೋರಿದ ಪರಿಣಾಮ ಆಟೋ ಚಾಲಕ ಪ್ರಾಣವನ್ನು ಬಿಟ್ಟಿದ್ದಾನೆ. ಆಟೋ ಚಾಲಕ (auto driver) ಕಂಟ್ರೋಲ್ ಸಿಗದೇ ಓಮಿನಿಗೆ ಗುದ್ದಿದ್ದಾನೆ. ಗಾಯಗೊಂಡ ಆತ ಹೊಯ್ಸಳ ಪೊಲೀಸರ(police) ಬಲಿ ಪ್ರಾಣ ಭಿಕ್ಷೆ ಕೇಳಿದ್ರೂ, ಯಾವುದೇ ರೀತಿ ಸ್ಪಂದನೆ ನೀಡದೆ ತೆರಳಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ಘಟನೆ ಅಲ್ಲಿರುವ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಇದನ್ನೂ ವೀಕ್ಷಿಸಿ: ಸದನದ ಗೌರವಕ್ಕೆ ಧಕ್ಕೆ ತಂದಿತಾ ಬಿಜೆಪಿ ಹೈಕಮಾಂಡ್ ನಿರ್ಧಾರ ?: ವಿಪಕ್ಷ ನಾಯಕನಿಲ್ಲದೇ ಬಜೆಟ್ ಮಂಡನೆ ?