ಖೂಬಾ ‘ಮಂಜೀರಾ’ ಕಂಪನಿಗೆ ಕಾರ್ಮಿಕ ಇಲಾಖೆ ನೋಟಿಸ್
- ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ‘ಡಿ’ ಗ್ರೂಪ್ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸದ ಆರೋಪ
- ಗುತ್ತಿಗೆದಾರ ಅಶೋಕ್ ಖೂಬಾ ಒಡೆತನದ ಮೆ. ಮಂಜೀರಾ ಕಂಪನಿಗೆ ನೋಟಿಸ್
- 1948ರ ಅಡಿ ಪ್ರಾಧಿಕಾರದ ನ್ಯಾಯಾಲಯ ಜೂ.1ರಂದು ಹೇಳಿಕೆ ಸಲ್ಲಿಸುವಂತೆ ನೋಟಿಸ್ ಜಾರಿ
ಬೀದರ್ (ಜೂ.01): ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ‘ಡಿ’ ಗ್ರೂಪ್ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಅಶೋಕ್ ಖೂಬಾ ಒಡೆತನದ ಮೆ. ಮಂಜೀರಾ ಎಂಜಿನಿಯರಿಂಗ್ ಅಂಡ್ ಕನ್‌ಸ್ಟ್ರಕ್ಷನ್ ಕಂಪನಿ ಹಾಗೂ ಬ್ರಿಮ್ಸ್ ನಿರ್ದೇಶಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ, 1948ರ ಅಡಿ ಪ್ರಾಧಿಕಾರದ ನ್ಯಾಯಾಲಯ ಜೂ.1ರಂದು ಹೇಳಿಕೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.
BRIMS ಸಿಬ್ಬಂದಿಗೆ 1 ವರ್ಷಗಳಿಂದ ಸೂಕ್ತ ವೇತನವಿಲ್ಲ, ಖೂಬಾ ಸಹೋದರರಿಂದ ಅನ್ಯಾಯ.?
ವೇತನ ಪಾವತಿಯಲ್ಲಿ ಅನ್ಯಾಯ ಆಗಿದೆ ಎಂದು ‘ಕನ್ನಡಪ್ರಭ’ ಹಾಗೂ ಸಹೋದರ ಸಂಸ್ಥೆ ‘ಸುವರ್ಣ ನ್ಯೂಸ್’ ವರದಿ ಪ್ರಕಟಿಸಿ ಗಮನ ಸರ್ಕಾರದ ಸೆಳೆದಿತ್ತು.ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಅಂಬಾದಾಸ್ ಗಾಯಕವಾಡ್ ಹಾಗೂ ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಾಸ್ವಾನ್ ಕಾರ್ಮಿಕ ಇಲಾಖೆಗೆ 2020ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಈ ಸಂಬಂಧ ದೂರು ಸಲ್ಲಿಸಿದ್ದರು.