Asianet Suvarna News Asianet Suvarna News

Chitradurga: ಅನ್ನದಲ್ಲಿ ಸತ್ತು ಬಿದ್ದ ಜಿರಳೆ, ಅಧಿಕಾರಿಗಳಿಗೆ ಜನರಿಂದ ಸಖತ್‌ ತರಾಟೆ

ಜಿಲ್ಲೆಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಈಗಾಗಲೇ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದಾರೆ. ಹಾಗೂ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

ಚಿತ್ರದುರ್ಗ (ಆ.25): ಜಿಲ್ಲೆಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಈಗಾಗಲೇ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದಾರೆ. ಹಾಗೂ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಂಬಂಧ ಕವಾಡಿಗರಹಟ್ಟಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಗಂಜಿ ಕೇಂದ್ರದಿಂದ ವಿತರಿಸಿದ್ದ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ಹೀಗಾಗಿ ವಿಷಪೂರಿತ ಆಹಾರದಿಂದ ಸಮಸ್ಯೆಯಾದರೆ ಹೊಣೆ ಯಾರು? ಎಂದು ಗಂಜಿ ಕೇಂದ್ರದ ಸಿಬ್ಬಂದಿಗೆ ಜನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ‌ ಪ್ರತಿಭಟನೆ ನಡೆಸಿ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದು, ಗಂಜಿ ಕೇಂದ್ರದ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆಹಾರದ ಪರೀಕ್ಷೆ ನಡೆಸಿ ಕ್ರಮ‌ ಜರುಗಿಸುವ​ ಭರವಸೆ ನೀಡಿದ್ದಾರೆ. ಆದರೆ ಪರೀಕ್ಷಿಸಿ ಕ್ರಮ ಕೈಗೊಳ್ಳುವ ನಂಬಿಕೆ ಇಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Video Top Stories