ಡೆಡ್ಲಿ ವೈರಸ್ ಬೆನ್ನಲ್ಲೇ ಮೈಸೂರಿನಲ್ಲಿ ಕೊರೋನಾ ಸ್ಫೋಟ

ರಾಜ್ಯದಲ್ಲಿ ವಿದೇಶಿ ಹೊಸ ತಳಿ ಓ-ಮಿಕ್ರಾನ್ ವೈರಸ್‌ ಆತಂಖ ಮೂಡಿಸಿದೆ. ಇದರ ಮಧ್ಯೆ ನರ್ಸಿಂಗ್ ಕಾಲೇಜುಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆ.

First Published Nov 29, 2021, 4:11 PM IST | Last Updated Nov 29, 2021, 4:11 PM IST

ಮೈಸೂರು, (ನ.29): ರಾಜ್ಯದಲ್ಲಿ ವಿದೇಶಿ ಹೊಸ ತಳಿ ಒಮಿಕ್ರೋನ್‌ ವೈರಸ್‌ ಆತಂಖ ಮೂಡಿಸಿದೆ. ಇದರ ಮಧ್ಯೆ ನರ್ಸಿಂಗ್ ಕಾಲೇಜುಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆ.

Omicron Variant: ಇನ್ಮುಂದೆ ಶಾಲಾ, ಕಾಲೇಜಲ್ಲಿ ರ‍್ಯಾಂಡಮ್‌ ಟೆಸ್ಟ್‌

ಹೌದು..ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿ ಕೊರೋನಾ ಸೋಂಕು ದೃಢಪಟ್ಟಿತ್ತು. ಅದಾದ ಬಳಿಕ ಆನೇಕಲ್‌ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮೈಸೂರಿನ ನರ್ಸಿಂಗ್‌ ಕಾಲೇಜು, ಹಾಸ್ಟೆಲ್‌ನಲ್ಲಿ 72 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಆತಂಕ ಮೂಡಿಸಿದೆ.