Asianet Suvarna News Asianet Suvarna News

ಒಂದೇ ದಿನ 6 ಪ್ರಕರಣ: ವಿಜಯಪುರದಲ್ಲಿ ಫಿಕ್ಸ್‌ ಆಯ್ತಾ ಕೊರೋನಾ ಟೈಂ ಬಾಂಬ್‌?

ಕೊರೋನಾ ಸೋಂಕಿತೆಯ ಪತಿ ಸಾವು| ಎಚ್ಚೆತ್ತ ಜಿಲ್ಲಾಡಳಿತ| 150 ಜನರ ಗಂಟಲು ದ್ರವ ಲ್ಯಾಬ್‌ಗೆ ಕಳುಹಿಸಿದ ಜಿಲ್ಲಾಡಳಿತ| ಸೋಂಕಿತ ವೃದ್ಧೆಯ ಕುಟುಂಬದ 27 ಜನರು ವರದಿಗಾಗಿ ಕಾಯ್ದು ಕುಳಿತ ಜಿಲ್ಲಾಡಳಿತ|
First Published Apr 13, 2020, 1:24 PM IST | Last Updated Apr 13, 2020, 1:24 PM IST

ವಿಜಯಪುರ(ಏ.13): ನಗರದಲ್ಲಿ ಕೊರೋನಾ ಸೋಂಕಿತೆಯ ಪತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ 150 ಜನರ ಗಂಟಲು ದ್ರವವನ್ನ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದೆ. ಸೋಂಕಿತ ವೃದ್ಧೆಯ ಕುಟುಂಬದ 27 ಜನರು ವರದಿಗಾಗಿ ಜಿಲ್ಲಾಡಳಿತ ಕಾಯ್ದು ಕುಳಿತಿದೆ. 

ಮಹಾಮಾರಿ ಕೊರೋನಾಗೆ ಬೆಚ್ಚಿ ಬಿದ್ದ ಗುಮ್ಮಟನಗರಿ ವಿಜಯಪುರ

ಇನ್ನು ಕೊರೋನಾ ಪಾಸಿಟಿವ್‌ ವೃದ್ಧೆಯ ಪತಿ ಸಾವಿನ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ. ಒಂದೇ ದಿನ ಆರು ಕೊರೋನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಲಿತ ವೃದ್ಧೆ ವಾಸಿಸುತ್ತಿದ್ದ ಪ್ರದೇಶವನ್ನ ಸೀಲ್‌ಡೌನ್ ಮಾಡಿ, ಜನರು ಮನೆ ಬಿಟ್ಟು ಹೊರಗಡೆ ಬರದಂತೆ ಸೂಕ್ತ ಭದ್ರತೆ ಕೈಗೊಂಡಿದೆ.