Asianet Suvarna News Asianet Suvarna News

ಐಪಿಎಲ್ 2020: ಕನ್ನಡಿಗ ರಾಬಿನ್ ಉತ್ತಪ್ಪ ಕಳೆದ 3 ಪಂದ್ಯದಲ್ಲೂ ಫೇಲ್..!

Oct 2, 2020, 3:39 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ಅ.02): ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದು ಡಜನ್ ಕನ್ನಡದ ಆಟಗಾರರು ಆಡುತ್ತಿದ್ದಾರೆ. ಈ ಪೈಕಿ ಬಹುತೇಕ ಆಟಗಾರರು ಉತ್ತಮ ಪ್ರದರ್ಶನವನ್ನೇ ತೋರುತ್ತಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಮಾತ್ರ ಮಂಕಾಗಿದ್ದಾರೆ.

ರಾಬಿನ್ ಉತ್ತಪ್ಪ ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದಾರೆ. ಇದರ ಜತೆಗೆ ಕಳಪೆ ಕ್ಷೇತ್ರರಕ್ಷಣೆ ಮಾಡುತ್ತಿದ್ದಾರೆ. ಇದೂ ಸಾಲದು ಎನ್ನುವಂತೆ ಕ್ಯಾಚ್‌ ಕೈಚೆಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

IPL 2020: ಈ 4 ತಂಡಗಳ ಪಾಲಿಗೆ ನಾಯಕರೇ ವಿಲನ್..!

ಹೌದು, ಒಂದು ಕಾಲದಲ್ಲಿ ಆರೆಂಜ್ ಕ್ಯಾಪ್ ಒಡೆಯನಾಗಿದ್ದ ರಾಬಿನ್ ಉತ್ತಪ್ಪ ಯುಎಇ ನೆಲದಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಉತ್ತಪ್ಪ ಪ್ರದರ್ಶನ ಮಾತ್ರ ಕಳೆಗುಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.