Asianet Suvarna News Asianet Suvarna News

IPL 2020: ಕ್ರಿಕೆಟ್ ದಿಗ್ಗಜನ ಮಗನಿಗಾಗಿ ನಿಯಮ ಗಾಳಿಗೆ ತೂರಿದ ಬಿಸಿಸಿಐ..!

ಒಬ್ಬ ಕ್ರಿಕೆಟ್ ದಿಗ್ಗಜನನ್ನು ಖುಷಿ ಪಡಿಸುವುದಕ್ಕಾಗಿ ಬಿಸಿಸಿಐ ತನ್ನ ನಿಯಮವನ್ನೇ ಗಾಳಿಗೆ ತೂರಿದೆ. ಕೊರೋನಾ ಭೀತಿಯ ನಡುವೆ ಬಿಸಿಸಿಐ ಜಿದ್ದಿಗೆ ಬಿದ್ದರಂತೆ ಐಪಿಎಲ್ ಟೂರ್ನಿ ಆಯೋಜಿಸಿದೆ. ಆದರೆ ಸುರಕ್ಷತಾ ನಿಯಮುವನ್ನೇ ಗಾಳಿಗೆ ತೂರಿದೆ.

ದುಬೈ(ಸೆ.16): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿ ಆರಂಭಕ್ಕೂ ಮುನ್ನವೇ ಬಿಸಿಸಿಐ ಮಹಾನ್ ಯಡವಟ್ಟು ಮಾಡಿಕೊಂಡಿದೆ.

ಹೌದು, ಒಬ್ಬ ಕ್ರಿಕೆಟ್ ದಿಗ್ಗಜನನ್ನು ಖುಷಿ ಪಡಿಸುವುದಕ್ಕಾಗಿ ಬಿಸಿಸಿಐ ತನ್ನ ನಿಯಮವನ್ನೇ ಗಾಳಿಗೆ ತೂರಿದೆ. ಕೊರೋನಾ ಭೀತಿಯ ನಡುವೆ ಬಿಸಿಸಿಐ ಜಿದ್ದಿಗೆ ಬಿದ್ದರಂತೆ ಐಪಿಎಲ್ ಟೂರ್ನಿ ಆಯೋಜಿಸಿದೆ. ಆದರೆ ಸುರಕ್ಷತಾ ನಿಯಮುವನ್ನೇ ಗಾಳಿಗೆ ತೂರಿದೆ.

IPL 2020 ಸದ್ದಿಲ್ಲದೇ ಮುಂಬೈ ಇಂಡಿಯನ್ಸ್ ಕೂಡಿಕೊಂಡ್ರಾ ಅರ್ಜುನ್ ತೆಂಡುಲ್ಕರ್..!

ಅಂದಹಾಗೆ ಬಿಸಿಸಿಐ ನಿಯಮಗಳನ್ನು ಗಾಳಿಗೆ ತೂರಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ವಿಚಾರದಲ್ಲಿ. ಮುಂಬೈ ಇಂಡಿಯನ್ಸ್ ತಂಡದ ನೆಟ್‌ ಬೌಲರ್‌ ಆಗಿ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಂಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories