ರಸ್ತೆ ಮಧ್ಯೆ ಕಾಲೇಜು ಹುಡುಗೀರ ಫೈಟಿಂಗ್! ಕಾರಣ ಇದು!

ಹುಡುಗಿಯರು ನಡು ರಸ್ತೆಯಲ್ಲಿ ಜುಟ್ಟು ಜುಟ್ಟು ಹಿಡಿದು ಜಗಳ ಆಡುತ್ತಿರುವ ವಿಡಿಯೋವೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Aug 4, 2022, 3:43 PM IST | Last Updated Aug 4, 2022, 3:43 PM IST

ಇತ್ತೀಚೆಗೆ ಹುಡುಗಿಯರು ಕೂಡ ನಡುರಸ್ತೆಯಲ್ಲಿ ಕಿತ್ತಾಡುವುದು ಸಾಮಾನ್ಯವಾಗಿದೆ. ಯಾರ ಜಗಳ ಬೇಕಾದರೂ ಬಿಡಿಸಬಹುದು ಆದರೆ ಹುಡುಗಿಯರ ಜಗಳ ಮಾತ್ರ ಬಿಡಿಸಲಾಗದು ಎಂಬುದು ಹುಡುಗರ ಮಾತು. ಹಾಗೆಯೇ ಇಲ್ಲಿ ನಡುರಸ್ತೆಯಲ್ಲಿ ಕಿತ್ತಾಡುತ್ತಿದ್ದ ಹುಡುಗಿಯರ ಜಗಳ ಬಿಡಿಸಲು ಕೆಲ ಯುವಕರು ಹಾಗೂ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇತ್ತ ಹೆಣ್ಣು ಮಕ್ಕಳು ನಡುರಸ್ತೆ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಜುಟ್ಟು ಜುಟ್ಟು ಹಿಡಿದು, ರಸ್ತೆಯಲ್ಲಿ ಉರುಳಿಕೊಂಡು ಕಿತ್ತಾಡಿದ್ದಾರೆ. ಛತ್ತೀಸ್‌ಗಡದ ಸೂರತ್‌ಪುರ ಜಿಲ್ಲೆಯ ಒಂದು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಳಿಕ ಸ್ಥಳೀಯರೇ ಕಷ್ಟಪಟ್ಟು ಯುವತಿಯರ ಜಗಳವನ್ನು ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯರ ಕಿತ್ತಾಟದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.