Asianet Suvarna News Asianet Suvarna News

Uttar Pradesh Elections: ಯೋಗಿ VS ಅಖಿಲೇಶ್, ಉತ್ತರ ಗದ್ದುಗೆ ಯಾರಿಗೆ.?

ಇನ್ನೇನು ಬಹುತೇಕ ಜನವರಿ ಎರಡನೇ ವಾರದಲ್ಲಿ ಉತ್ತರ ಪ್ರದೇಶದ ಚುನಾವಣೆ (Uttar Pradesh Election) ಘೋಷಣೆ ಆಗಲಿದೆ. ಮಾರ್ಚ್ ಮೂರನೇ ವಾರ ಯುಪಿಯಲ್ಲಿ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಬೇಕು. ಇವತ್ತಿನ ಸ್ಥಿತಿಗತಿ ನೋಡಿದರೆ ಯುಪಿ ಯುದ್ಧ ನೇರವಾಗಿ ಯೋಗಿ (Yogi Adithyanath) ಮತ್ತು ಅಖಿಲೇಶ್‌ ಯಾದವ್‌ (Akhilesh Yadav) ನಡುವೆ ನಡೆಯಲಿದೆ. 

First Published Dec 25, 2021, 2:30 PM IST | Last Updated Dec 25, 2021, 3:14 PM IST

ಬೆಂಗಳೂರು (ಡಿ. 25): ಇನ್ನೇನು ಬಹುತೇಕ ಜನವರಿ ಎರಡನೇ ವಾರದಲ್ಲಿ ಉತ್ತರ ಪ್ರದೇಶದ ಚುನಾವಣೆ (Uttar Pradesh Election) ಘೋಷಣೆ ಆಗಲಿದೆ. ಮಾರ್ಚ್ ಮೂರನೇ ವಾರ ಯುಪಿಯಲ್ಲಿ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಬೇಕು. ಇವತ್ತಿನ ಸ್ಥಿತಿಗತಿ ನೋಡಿದರೆ ಯುಪಿ ಯುದ್ಧ ನೇರವಾಗಿ ಯೋಗಿ (Yogi Adithyanath) ಮತ್ತು ಅಖಿಲೇಶ್‌ ಯಾದವ್‌ (Akhilesh Yadav) ನಡುವೆ ನಡೆಯಲಿದೆ. 

UP Election Opinion Poll: ಮೋದಿ ಯೋಜನೆ, ಯೋಗಿ ಆಡಳಿತ, ಪೂರ್ಣ ಬಹುಮತಗಳೊಂದಿಗೆ ಮತ್ತೆ ಬಿಜೆಪಿ ಸರ್ಕಾರ ಖಚಿತ!

ಚುನಾವಣೆಗೆ ಕೇವಲ 60 ದಿನಗಳು ಉಳಿದಿದ್ದರೂ ಯುಪಿಯಲ್ಲಿ ಮಾಯಾವತಿ ಬಗ್ಗೆ ಚರ್ಚೆಯೇ ಇಲ್ಲ. ಆದರೆ ಮಾಯಾವತಿ ಬಳಿ ದಲಿತ, ಜಾಟವ ಮತಗಳು ಗಟ್ಟಿಯಾಗಿಯೇ ಇವೆ. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸದ್ದೇನೋ ಮಾಡುತ್ತಿದ್ದಾರೆ. ಇನ್ನು ಯುಪಿಯಲ್ಲಿ ಅಭಿವೃದ್ಧಿಗಿಂತ ಹಿಂದುತ್ವ ಮತ್ತು ಜಾತಿಗಳ ಮರು ಕ್ರೋಢೀಕರಣದ ಮೇಲೆ ವೋಟು ಬೀಳುವುದು ಜಾಸ್ತಿ. 2014ರಿಂದ 19ರ ವರೆಗಿನ ಮಾದರಿಯಲ್ಲೇ ಜಾತಿಗಳು ವೋಟು ಮಾಡಿದರೆ ಬಿಜೆಪಿಗೆ ಮರಳಿ ಲಾಭ ಆಗಬಹುದು. ಸ್ವಲ್ಪ ಕ್ರೋಢೀಕರಣಗೊಂಡರೆ ಬಿಜೆಪಿ ವೋಟು ಪ್ರತಿಶತ ಕಡಿಮೆ ಆಗಿ ಸೀಟುಗಳ ಸಂಖ್ಯೆ ತಗ್ಗಬಹುದು. ಆದರೆ ಭಾರೀ ಪ್ರಮಾಣದಲ್ಲಿ ವಿರುದ್ಧವಾಗಿ ಕ್ರೋಢೀಕರಣಗೊಂಡರೆ ಮಾತ್ರ ಬಿಜೆಪಿಗೆ ಕಷ್ಟ ಆಗಬಹುದು.  ಈ ಬಗ್ಗೆ ಒಂದು ವರದಿ ಇಲ್ಲಿದೆ.