Asianet Suvarna News Asianet Suvarna News

UP Elections: 692 ಅಭ್ಯರ್ಥಿಗಳ ರಾಜಕೀಯ ಭವಿಷ್ಯ 2.24 ಕೋಟಿ ಮತದಾರ ಕೈಯಲ್ಲಿ

ಉತ್ತರ ಪ್ರದೇಶದಲ್ಲಿ 5ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಕೋಟಿ 24  ಲಕ್ಷ ಮತದಾರರು 692  ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

First Published Feb 27, 2022, 12:56 PM IST | Last Updated Feb 27, 2022, 12:56 PM IST

ಲಕ್ನೋ(ಫೆ.27): ಉತ್ತರ ಪ್ರದೇಶದಲ್ಲಿ 5ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಕೋಟಿ 24  ಲಕ್ಷ ಮತದಾರರು 692  ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್, ಬಾರಬಕಿ,  ಬಹರೈಚ್,  ಶ್ರಾವಸ್ತಿ ಹಾಗೂ ಗೋಂಡಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧಿ ಪಡೆದಿರುವ ಅಮೇಥಿ ಹಾಗೂ ರಾಯ್ಬರೇಲಿ,  ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಅಯೋಧ್ಯಾ ಕ್ಷೇತ್ರಗಳಲ್ಲಿ ಭಾನುವಾರ ಚುನಾವಣೆ ನಡೆಯಲಿದೆ. 

ವಿಐಪಿ ಅಭ್ಯರ್ಥಿಗಳ ಬಗ್ಗೆ ನೋಡುವುದಾಧರೆ,  ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರುಗಳಾದ ಸಿದ್ಧಾರ್ಥ್ ನಾಗ್‌ ಸಿಂಗ್,  ರಾಜೇಂದ್ರ ಸಿಂಗ್‌, ನಂದ ಗೋಪಾಲ್‌ ಗುಪ್ತಾ ಹಾಗೂ ರಾಮಪತಿ ಶಾಸ್ತ್ರಿ ಕಣದಲ್ಲಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ  ಭಾನುವಾರದ ಚುನಾವಣೆ ಮಗಳು ಹಾಗೂ ಅಮ್ಮನ ನಡುವಿನ ರಾಜಕೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕೇಂದ್ರ ಸಚಿವೆ, ಅಪ್ನಾದಳ (ಸೋನೆಲಾಲ್) ಪಕ್ಷದ ಮುಖ್ಯಸ್ಥೆ ಅನುಪ್ರಿಯ ಪಟೇಲ್‌ ತಾಯಿ ಕೃಷ್ನಾ ಪಟೇಲ್‌ ಅಪ್ನಾದಳ್ (ಕಮೆರಾವಾದಿ) ಪಕ್ಷದಿಂದ ಪ್ರತಾಪ್‌ಗಢದಿಂದ ಕಣದಲ್ಲಿದ್ದಾರೆ. ಅಪ್ನಾದಳ್ (ಕೆ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ, ಅನುಪ್ರಿಯಾ ಪಟೇಲ್ ತನ್ನ ಅಮ್ಮನನ್ನು ಸೋಲಿಸಲು ಮಿತ್ರ ಪಕ್ಷ ಬಿಜೆಪಿಗೆ ಸೀಟು ಬಿಟ್ಟುಕೊಟ್ಟಿದ್ದಾರೆ.