Asianet Suvarna News Asianet Suvarna News

ಆಜಂ ಖಾನ್ ಜೈಲಿಗೆ ಹೋಗಲು ಅಖಿಲೇಶ್ ಕಾರಣ; SP-BJP ವಿರುದ್ಧ ಓವೈಸಿ ವಾಗ್ದಾಳಿ

- ಸಮಾಜವಾದಿ ಪಕ್ಷದ ವಿರುದ್ಧ ಒವೈಸಿ ತೀವ್ರ ವಾಗ್ದಾಳಿ 

- 'ಆಜಂ ಖಾನ್ ಜೈಲಿಗೆ ಹೋಗಲು ಅಖಿಲೇಶ್ ಕಾರಣ'

-n95 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಎಐಎಂಐಎಂ ಪಕ್ಷ

- ದುಮರಿಯಾಗಂಜ್‌ನಲ್ಲಿ ಒವೈಸಿ ಭರ್ಜರಿ ಪ್ರಚಾರ

ಲಕ್ನೋ (ಫೆ. 28):  ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿರುವ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾದ ಅಜಂ ಖಾನ್ ಮತ್ತು ಅತೀಕ್ ಅಹ್ಮದ್  ಜೈಲಿಗೆ ಹೋಗಲು ಅಖಿಲೇಶ್ ಯಾದವ್ ಜವಾಬ್ದಾರರು ಎಂದು ಒವೈಸಿ ಆರೋಪ ಮಾಡಿದ್ದಾರೆ.

ಉಪ್ಪನ್ನು ಸಿದ್ದಪಡಿಸಿಕೊಳ್ಳಿ, ಯೋಗಿ, ಮೋದಿಯನ್ನು ಸಮಾಧಿ ಮಾಡ್ತೀವಿ ಎಂದ ಅಜಯ್‌ರೈಗೆ ಶಾಕ್! 

ಪಕ್ಷದಲ್ಲಿ ಆಜಂ ಖಾನ್ ಬೆಳೆವಣಿಗೆಯನ್ನು ಅಖಿಲೇಶ್ ಯಾದವ್ ಅವರಿಂದ ಸಹಿಸಲಾಗಲಿಲ್ಲ ಎಂದು  ಒವೈಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ದುಮರಿಯಾಗಂಜ್ ವಿಧಾನಸಭಾ ಕ್ಷೇತ್ರದಲ್ಲಿ, ಎಐಎಂಐಎಂ ಅಭ್ಯರ್ಥಿ ಇರ್ಫಾನ್ ಮಲಿಕ್ ಪರ ಪ್ರಚಾರಕ್ಕೆ ಬಂದಿದ್ದಅಸಾದುದ್ದೀನ್ ಓವೈಸಿ ಬಿಜೆಪಿಯನ್ನು ಕೂಡಾ  ಗುರಿಯಾಗಿಸಿದ್ದಾರೆ. ಜನರಿಗೆ ಈ ದೇಶದ ಉಪ್ಪಿನ ಋಣವಿದೆ, ಆದರೆ ಪ್ರಧಾನಿ ಮೋದಿ ಅದು ತನ್ನ ಋಣವೆಂಬಂತೆ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂದು ಐದನೇ ಹಂತದ ಚುನಾವಣೆಗಳು ನಡೆದಿವೆ.  ಇನ್ನೆರಡು ಹಂತಗಳ ಮತದಾನ ಬಾಕಿ ಇದ್ದು, ಎಲ್ಲಾ ಪಕ್ಷಗಳು ತೀವ್ರ ಪೈಪೋಟಿಗಿಳಿದಿವೆ. ಉತ್ತರ ಪ್ರದೇಶದ ಗದ್ದುಗೆ ಏರಲು ಎಲ್ಲಾ ಪಕ್ಷಗಳ ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 122 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Video Top Stories