Asianet Suvarna News Asianet Suvarna News

UP Election: ವರುಣ್ ಗಾಂಧಿ ಸೈಡ್‌ಲೈನ್ ಆಗಿದ್ಹೇಕೆ..?

ಉತ್ತರ ಪ್ರದೇಶದಲ್ಲಿ (UP Election) ಗಾಂಧಿ ಕುಟುಂಬವನ್ನು ಎದುರಿಸೋಕೆ ಬಿಜೆಪಿ ಅದ್ಭುತವಾದ ರಣತಂತ್ರ ಹೆಣೆದಿತ್ತು. ಗಾಂಧಿ ಕುಟುಂಬದ ವಿರುದ್ಧ ಅದೇ ಕುಟುಂಬದ ವರುಣ್ ಗಾಂಧಿಯನ್ನು (Varun Gandhi) ಎತ್ತಿ ಕಟ್ಟಿತ್ತು. 

First Published Feb 21, 2022, 5:52 PM IST | Last Updated Feb 21, 2022, 5:52 PM IST

ಲಕ್ನೋ (ಫೆ. 21):  ಉತ್ತರ ಪ್ರದೇಶದಲ್ಲಿ (UP Election) ಗಾಂಧಿ ಕುಟುಂಬವನ್ನು ಎದುರಿಸೋಕೆ ಬಿಜೆಪಿ ಅದ್ಭುತವಾದ ರಣತಂತ್ರ ಹೆಣೆದಿತ್ತು. ಗಾಂಧಿ ಕುಟುಂಬದ ವಿರುದ್ಧ ಅದೇ ಕುಟುಂಬದ ವರುಣ್ ಗಾಂಧಿಯನ್ನು (Varun Gandhi) ಎತ್ತಿ ಕಟ್ಟಿತ್ತು.  2017 ರ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯರಾಗಿದ್ದ ವರುಣ್ ಗಾಂಧಿ ಈ ಬಾರಿ ಅಖಾಡದಲ್ಲಿ ಕಾಣಿಸ್ತಾ ಇಲ್ಲ. ವರುಣ್ ಗೈರು ಬಗ್ಗೆ ಬೇರೆ ಬೇರೆ ಮಾತುಗಳು ಕೇಳಿ ಬರುತ್ತಿದೆ. 

ಕೃಷಿ ಕಾಯ್ದೆ ಹೋರಾಟ ಸಮಯದಲ್ಲಿ ವರುಣ್ ಗಾಂಧಿ ರೈತರ ಪರವಾಗಿ ನಿಂತಿದ್ದರು. ಇದು ಪಕ್ಷದ ಕೆಂಗಣ್ಣಿಗೆ ಕಾರಣವಾಗಿತ್ತು. ಅವರನ್ನೀಗ ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡರೆ ಲಾಭಕ್ಕಿಂತ, ನಷ್ಟವೇ ಹೆಚ್ಚೆಂದು ಅವರನ್ನು ಬಿಜೆಪಿ ದೂರವಿಟ್ಟಿದೆ. 

UP Election: ಯಾದವೇತರರು ಒಟ್ಟಿಗೆ ಬಂದರೆ ಬಿಜೆಪಿಗೆ ಲಾಭ, ಬರದಿದ್ರೆ ಅಖಿಲೇಶ್‌ಗೆ ಲಾಭ