Asianet Suvarna News Asianet Suvarna News

Toolkit case: 10 ದಿನದ ಬಳಿಕ ದಿಶಾ ರವಿಗೆ ಜಾಮೀನು!

ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದಿಶಾ ರವಿಗೆ ದೆಹಲಿಯ ಪಟಿಯಾಲ ಕೋರ್ಟ್ ಜಾಮೀನು ನೀಡಿದೆ. 10 ದಿನಗಳಿಂದ ನ್ಯಾಯಾಂಗ ಬಂಧನ, ಪೊಲೀಸ್ ಕಸ್ಟಡಿಯಲ್ಲಿದ್ದ ಬೆಂಗಳೂರಿನ ದಿಶಾ ರವಿ ಕೊನೆಗೂ ಬಿಡುಗಡೆ ಭಾಗ್ಯ ಕಂಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

Feb 23, 2021, 5:42 PM IST

ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದಿಶಾ ರವಿಗೆ ದೆಹಲಿಯ ಪಟಿಯಾಲ ಕೋರ್ಟ್ ಜಾಮೀನು ನೀಡಿದೆ. 10 ದಿನಗಳಿಂದ ನ್ಯಾಯಾಂಗ ಬಂಧನ, ಪೊಲೀಸ್ ಕಸ್ಟಡಿಯಲ್ಲಿದ್ದ ಬೆಂಗಳೂರಿನ ದಿಶಾ ರವಿ ಕೊನೆಗೂ ಬಿಡುಗಡೆ ಭಾಗ್ಯ ಕಂಡಿದ್ದಾರೆ. 

ದೇಶದ್ರೋಹ, ಭಾರತದ ವಿರುದ್ಧ ಪಿತೂರಿ ಸೇರಿದಂತೆ ಐಪಿಎಸಿ ಸೆಕ್ಷನ್ ಅಡಿಯಲ್ಲಿ ಗಂಭೀರ ಪ್ರಕರಣಗಳು ದಿಶಾ ರವಿ ಮೇಲೆ ದಾಖಲಾಗಿವೆ. ಟೂಲ್ ಕಿಟ್ ಪ್ರಕರಣ ಸಂಬಂಧ ದೆಹಲಿ ಪೊಲೀಸರು ದಿಶಾ ರವಿಯನ್ನು ಬಂಧಿಸಿದ್ದರು. ಫೆಬ್ರವರಿ 13 ರಂದು ಬೆಂಗಳೂರಿನ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇದೀಗ 10 ದಿನಗಳ ಬಳಿಕ ದಿಶಾ ರವಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮೀನಿನ ವೇಳೆ ದಿಶಾ ರವಿಗೆ 1 ಲಕ್ಷ ರೂಪಾಯಿ ಬಾಂಂಡ್ ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಮೂಲಕ ದಿಶಾ ರವಿ