ಕೊರೊನಾ ಲಸಿಕೆಗೆ 50 ಸಾವಿರ ಕೋಟಿ ತೆಗೆದಿಟ್ಟ ಕೇಂದ್ರ; ಒಬ್ಬರಿಗೆ ತಗಲುವ ವೆಚ್ಚವೆಷ್ಟು ಗೊತ್ತಾ?
2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. 50 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ತೆಗೆದಿಟ್ಟಿದೆ. ಲಸಿಕೆಗೆ 440 ರಿಂದ 515 ರೂ ತಗಲುವ ಅಂದಾಜಿದೆ. ಒಬ್ಬ ವ್ಯಕ್ತಿಗೆ 2 ಇಂಜೆಕ್ಷನ್, ಒಂದು ಇಂಜೆಕ್ಷನ್‌ಗೆ 147 ರೂ ತಗುಲಲಿದೆ.
ಬೆಂಗಳೂರು (ಅ. 27): 2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. 50 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ತೆಗೆದಿಟ್ಟಿದೆ. ಲಸಿಕೆಗೆ 440 ರಿಂದ 515 ರೂ ತಗಲುವ ಅಂದಾಜಿದೆ. ಒಬ್ಬ ವ್ಯಕ್ತಿಗೆ 2 ಇಂಜೆಕ್ಷನ್, ಒಂದು ಇಂಜೆಕ್ಷನ್‌ಗೆ 147 ರೂ ತಗುಲಲಿದೆ.
ಅಂತೂ ಇಂತೂ ಬರಲಿದೆ ಲಸಿಕೆ ; 2021 ರ ಆರಂಭದಲ್ಲಿ ಸಿಗಲಿದೆ
ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಕೂಡಾ ಮಾತನಾಡಿದ್ದಾರೆ. ಮೊದಲ ಹಂತದಲ್ಲಿ 100 ಕೋಟಿ ಜನರಿಗೆ ಲಸಿಕೆ ಕೊಡುವ ಸಾಮರ್ಥ್ಯವಿದೆ. ಭಾರತದಲ್ಲಿ 1600 ಜನರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. 2 ಹಾಗೂ 3 ನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ಹೇಳಿದ್ದಾರೆ.