Asianet Suvarna News Asianet Suvarna News

News Hour: ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ, ಸ್ಥಳ ಸೀಲ್‌ಡೌನ್‌ಗೆ ಕೋರ್ಟ್ ಆದೇಶ

ವಾರಾಣಸಿಯ ಗ್ಯಾನವಾಪಿ ಮಸೀದಿ (Gyanvapi Masjid)ವಿಡಿಯೋ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಅಲ್ಲಿ ಶಿವಲಿಂಗವೊಂದು (Shivling)  ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲರೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬೆನ್ನಲ್ಲೇ, ಶಿವಲಿಂಗ ಪತ್ತೆಯಾದ ಸ್ಥಳ ಸೀಲ್‌ಡೌನ್‌ಗೆ ವಾರಾಣಸಿ ನ್ಯಾಯಾಲಯ (Varanasi Court) ಆದೇಶ ಹೊರಡಿಸಿದೆ. 

ಲಕ್ನೋ (ಮೇ.18):  ವಾರಾಣಸಿಯ ಗ್ಯಾನವಾಪಿ ಮಸೀದಿ (Gyanvapi Masjid)ವಿಡಿಯೋ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಅಲ್ಲಿ ಶಿವಲಿಂಗವೊಂದು (Shivling)  ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲರೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬೆನ್ನಲ್ಲೇ, ಶಿವಲಿಂಗ ಪತ್ತೆಯಾದ ಸ್ಥಳ ಸೀಲ್‌ಡೌನ್‌ಗೆ ವಾರಾಣಸಿ ನ್ಯಾಯಾಲಯ (Varanasi Court) ಆದೇಶ ಹೊರಡಿಸಿದೆ. 

ಒಂದು ವೇಳೆ ಈ ಶಿವಲಿಂಗ ಪತ್ತೆಯಾಗಿದ್ದು ಖಚಿತಪಟ್ಟರೆ, ಇಡೀ ಪ್ರಕರಣಕ್ಕೆ ಹೊಸ ದಿಕ್ಕು ಸಿಗಲಿರುವ ಹಿನ್ನೆಲೆಯಲ್ಲಿ, ವಿಡಿಯೋ ಚಿತ್ರೀಕರಣಕ್ಕೆ ಕೋರ್ಟ್ ನೇಮಿಸಿದ್ದ ಸಮಿತಿ ವರದಿಯ ಮೇಲೆ ಇದೀಗ ಎಲ್ಲರ ದೃಷ್ಟಿನೆಟ್ಟಿದೆ.

ಕಾಶಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಗ್ಯಾನವಾಪಿ ಮಸೀದಿಯ ಒಳಭಾಗದ ವಿಡಿಯೋ ಚಿತ್ರೀಕರಣ ನಡೆಸಿದ್ದ ತಂಡಕ್ಕೆ ವರದಿ ಸಲ್ಲಿಸಲು ಸ್ಥಳೀಯ ನ್ಯಾಯಾಲಯ ಹೆಚ್ಚುವರಿ 2 ದಿನಗಳ ಕಾಲಾವಕಾಶ ನೀಡಿದೆ.

3 ದಿನಗಳ ಕಾಲ ನಡೆದ ವಿಡಿಯೋ ಸಮೀಕ್ಷೆ ಸೋಮವಾರವೇ ಮುಗಿದಿತ್ತಾದರೂ, ಶೇ.50ರಷ್ಟುಮಾತ್ರ ವರದಿ ಪೂರ್ಣಗೊಂಡಿದೆ. ಉಳಿದ ಭಾಗವನ್ನೂ ಪೂರ್ಣಗೊಳಿಸಿ ಸಲ್ಲಿಕೆ ಮಾಡಲು ಹೆಚ್ಚುವರಿ ಎರಡು ದಿನ ಸಮಯ ನೀಡುವಂತೆ ಕಮಿಷ್ನರ್‌ಗಳ ಸಮಿತಿ ಕೋರ್ಚ್‌ಗೆ ಮನವಿ ಮಾಡಿತ್ತು. ಈ ಮನವಿ ಒಪ್ಪಿದ ನ್ಯಾಯಾಲಯ ಹೆಚ್ಚುವರಿ 2 ದಿನ ನೀಡಲು ಸಮ್ಮತಿಸಿತು.

Video Top Stories