Asianet Suvarna News Asianet Suvarna News

Rijiju Dance ಕಿರಣ್‌ ರಿಜಿಜು ನೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಫಿದಾ..!

ಅರುಣಾಚಲ ಪ್ರದೇಶದ ಕಝಲಾಂಗ್ ಗ್ರಾಮದ ಸಜೊಲಾಗ್‌ ಜನರು ತಮ್ಮ ಊರಿಗೆ ಬರುವ ಅತಿಥಿಗಳನ್ನು ಹಾಡು-ನೃತ್ಯದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ಅದೇ ರೀತಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಪ್ರಗತಿ ಪರಿಶೀಲಿಸಲು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿನ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. 
 

ನವದೆಹಲಿ(ಸೆ.30): ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು (Kiren Rijiju) ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಅಲ್ಲಿನ ಜಾನಪದ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡಾ ರಿಜಿಜು ನೃತ್ಯಕ್ಕೆ ಮನಸೋತಿದ್ದಾರೆ.

ಅರುಣಾಚಲ ಪ್ರದೇಶ (Arunachal Pradesh)ದ ಕಝಲಾಂಗ್ ಗ್ರಾಮದ ಸಜೊಲಾಗ್‌ ಜನರು ತಮ್ಮ ಊರಿಗೆ ಬರುವ ಅತಿಥಿಗಳನ್ನು ಹಾಡು-ನೃತ್ಯದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ಅದೇ ರೀತಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಪ್ರಗತಿ ಪರಿಶೀಲಿಸಲು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿನ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. 

'ಪ್ರಧಾನಿ ಮೋದಿಯಿಂದ ಭಾರತದ ಪರಿಕಲ್ಪನೆ ನಾಶ'

ಸಣ್ಣ ಗುಂಪಿನ ಮುಂದೆ ಕೇಂದ್ರ ಕಾನೂನು ಸಚಿವರು ಸಾಂಪ್ರದಾಯಿಕ ಹಾಡಿಗೆ ಮನಸಾರೆ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತಂತೆ ವಿಡಿಯೋ ಟ್ವೀಟ್‌ ಮಾಡಿರುವ ಕಿರಣ್ ರಿಜಿಜು ಅರುಣಾಚಲ ಪ್ರದೇಶದ ಜನಾಂಗದ ಪರಿಚಯ ಮಾಡಿಕೊಟ್ಟಿದ್ದಾರೆ.

ಕಿರಣ್ ರಿಜಿಜು ಡ್ಯಾನ್ಸ್‌ ನೋಡಿದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕವೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಕಾನೂನು ಸಚಿವರಾದ ಕಿರಣ್ ರಿಜಿಜು ಅವರು ಒಳ್ಳೆಯ ಡ್ಯಾನ್ಸರ್‌. ಅರುಣಾಚಲ ಪ್ರದೇಶದ ಭವ್ಯ ಸಂಸ್ಕೃತಿ ಕಂಡು ಸಂತೋಷವಾಯಿತು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಕಿರಣ್ ರಿಜಿಜಯ ಅರುಣಾಚಲ ಪ್ರದೇಶ ಪಶ್ಚಿಮ ಭಾಗದ ಸಂಸದರಾಗಿದ್ದಾರೆ. ಕ್ರೀಡಾ ಸಚಿವರಾಗಿ ಸೈ ಎನಿಸಿಕೊಂಡಿದ್ದ ಕಿರಣ್ ರಿಜಿಜು, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.
 

Video Top Stories