Asianet Suvarna News Asianet Suvarna News

ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ: ದೇಶದ ಹಲವೆಡೆ ಪ್ರತಿಭಟನೆ

ಚೀನಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ದೇಶದ ಜನತೆ| ಚೀನಾ ಮುರ್ದಾಬಾದ್‌ ಎಂಬ ಘೋಷಣೆ| ಭಾರತೀಯ ಯೋಧರ ಮೇಲಿನ ಚೀನಾ ದಾಳಿ ಖಂಡಿಸಿ ಪ್ರತಿಭಟನೆ|

ವಾರಣಾಸಿ(ಜೂ.17): ಭಾರತೀಯ ಯೋಧರ ಮೇಲಿನ ಚೀನಾ ದಾಳಿಯನ್ನ ಖಂಡಿಸಿದ ಜನ ಸಾಮಾನ್ಯರು ದೇಶದ ಹಲವಡೆ ಪ್ರತಿಭಟನೆ ನಡೆಸಿದ್ದಾರೆ. ಚೀನಾ ವಿರುದ್ಧ ಘೋಷಣೆಗಳನ್ನ ಕೂಗಿ ಜನರು ಪ್ರತಿಭಟನೆ ನಡೆಸಿದ್ದಾರೆ. ಹಾಗೆ ಉತ್ತರ ಪ್ರದೇಶದಲ್ಲಿ ಚೀನಾ ವಿರುದ್ಧ ಜನರು ಘೋಷಣೆಗಳನ್ನ ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. 

ಗಡಿಯಲ್ಲಿ ಉದ್ವಿಗ್ನ: ಉಭಯ ದೇಶಗಳ ನಡುವೆ ಯುದ್ಧದ ಭೀತಿ..?

ಚಿಕ್ಕಮಕ್ಕಳೂ, ವೃದ್ಧರು ಎಂಬ ವಯಸ್ಸಿನ ಯಾವುದೇ ಅಂತರವಿಲ್ಲದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈಯಲ್ಲಿ ಚೀನಾ ವಿರುದ್ಧ ಘೋಷಣೆಗಳ ಭಿತ್ತಿಪತ್ರಗಳನ್ನ ಹಿಡಿದುಕೊಂಡು ಧರಣಿ ನಡೆಸಿದ್ದಾರೆ. ಚೀನಾ ಮುರ್ದಾಬಾದ್‌ ಎಂದು ಘೋಷಣೆಗಳನ್ನ ಕೂಗಿದ್ದಾರೆ.