Asianet Suvarna News Asianet Suvarna News

UP Elections: ವಾರಾಣಸಿ ಕ್ಲೀನ್‌ಸ್ವೀಪ್‌ಗೆ ಮೋದಿ ಮೆಗಾ ಪ್ಲಾನ್!

ಉತ್ತರ ಪ್ರದೇಶ ಹೈವೋಲ್ಟೇಜ್ ಅಖಾಡಗಳ ಪೈಕಿ ಪ್ರಧಾನಿ ಮೋದಿಯ ರಾಜಕೀಯ ಕರ್ಮಭೂಮಿ ವಾರಾಣಸಿಯೂ ಒಂದು. ಕದನ ಕುತೂಹಲ ಕೆರಳಿಸಿರುವ ವಾರಾಣಸಿಯನ್ನು ಬಿಜೆಪಿ ಈ ಬಾರಿಯೂ ಕ್ಲೀನ್‌ ಸ್ವೀಪ್ ಮಾಡುತ್ತಾ? ಪ್ರತಿಷ್ಠೆಯ ಪಣವಾಗಿರುವ ವಾರಾಣಸಿ ಯುದ್ಧ ಗೆಲ್ಲಲು ಪ್ರಧಾನಿ ಮೋದಿ ಮಾಡಿರುವ ತಂತ್ರಗಳೇನು? ಬಿಜೆಪಿ ಗೆಲ್ಲಿಸಲಿದೆಯಾ ಮೋದಿ ಕಾಶಿ ಕ್ರಾಂತಿ? ವಾರಾಣಸಿ ರಣಾಂಗಣದ ಅಸಲಿ ಚಿತ್ರಣ ಇಲ್ಲಿದೆ.

 

 

First Published Mar 2, 2022, 5:12 PM IST | Last Updated Mar 2, 2022, 5:12 PM IST

ಉತ್ತರ ಪ್ರದೇಶ ಹೈವೋಲ್ಟೇಜ್ ಅಖಾಡಗಳ ಪೈಕಿ ಪ್ರಧಾನಿ ಮೋದಿಯ ರಾಜಕೀಯ ಕರ್ಮಭೂಮಿ ವಾರಾಣಸಿಯೂ ಒಂದು. ಕದನ ಕುತೂಹಲ ಕೆರಳಿಸಿರುವ ವಾರಾಣಸಿಯನ್ನು ಬಿಜೆಪಿ ಈ ಬಾರಿಯೂ ಕ್ಲೀನ್‌ ಸ್ವೀಪ್ ಮಾಡುತ್ತಾ? ಪ್ರತಿಷ್ಠೆಯ ಪಣವಾಗಿರುವ ವಾರಾಣಸಿ ಯುದ್ಧ ಗೆಲ್ಲಲು ಪ್ರಧಾನಿ ಮೋದಿ ಮಾಡಿರುವ ತಂತ್ರಗಳೇನು? ಬಿಜೆಪಿ ಗೆಲ್ಲಿಸಲಿದೆಯಾ ಮೋದಿ ಕಾಶಿ ಕ್ರಾಂತಿ? ವಾರಾಣಸಿ ರಣಾಂಗಣದ ಅಸಲಿ ಚಿತ್ರಣ ಇಲ್ಲಿದೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಅಖಾಡವಾಗಿರುವುದು ವಾರಾಣಸಿ. ಯಾಕೆಂದರೆ ಇದು ಪ್ರಧಾನಿ ಮೋದಿಯವರ ರಾಜಕೀಯ ಕರ್ಮಭೂಮಿ. ದೆಶದ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟು ಗುಜರಾತ್‌ನಿಂದ ಉತ್ತರ ಪ್ರದೇಶಕ್ಕೆ ಬಂದಾಗ ಮೋದಿ ಆರಿಸಿಕೊಂಡಿದ್ದು ಇದೇ ವಾರಾಣಸಿಯನ್ನು. ಮೋದಿಯನ್ನು ಬರೋಬ್ಬರಿ ಎರಡು ಬಾರಿ ಪ್ರಧಾನಿ ಸಿಂಹಾಸನದ ಮೇಲೆ ಕೂರಿಸಿದ ಹೆಗ್ಗಳಿಕೆ ಇರುವ ವಾರಾಣಸಿ ಉತ್ತರ ಕುರುಕ್ಷೇತ್ರದಲ್ಲಿ ಈಗ ಹೈವೋಲ್ಟೇಜ್ ಅಖಾಡ.