ಯುದ್ಧ ಸೋತ ಪಾಕಿಸ್ತಾನಕ್ಕೆ ಪಶ್ಚಾತ್ತಾಪ, ಮಾತುಕತೆಗೆ ಆಹ್ವಾನ ನೀಡಿ ಭಾರತದ ಹೈಜಾಕ್ ತಂತ್ರ!
ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂದೇ ಗುರುತಿಸಿಕೊಂಡಿದೆ. ಇದೀಗ ಪಾಕ್ ಪರಿಸ್ಥಿತಿ ಶೋಚನೀಯ. ಜನರ ಕೈಯಲ್ಲಿ ದುಡ್ಡಿಲ್ಲ, ಆಹಾರದ ಬೆಲೆ ಚಿನ್ನಕ್ಕಿಂತ ದುಬಾರಿ. ಕೊಲೆ, ಸುಲಿಗೆ, ನೂಕಾಟ ನಡೆಯುತ್ತಿದೆ. ಇದರ ನಡುವೆ ಪಾಕಿಸ್ತಾನ ಭಾರತದ ಮಾತುಕತೆ ಆಹ್ವಾನ ನೀಡಿದ್ದೇಕೆ?
ಭಾರತದ ವಿರುದ್ದ ಮೂರು ಯುದ್ಧ ಸೋತ ಮೇಲೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪಶ್ಚತ್ತಾಪದ ಮಾತನಾಡುತ್ತಿದೆ. ತುತ್ತು ಅನ್ನಕ್ಕೆ ಹಾಹಾಕಾರ ಎದ್ದಿದೆ. ಗೋದಿ ಹಿಟ್ಟಿಗೆ ನೂಕಾಟ, ತಳ್ಳಾಟ ನಡೆದಿದೆ. ಇದೀಗ ಆರ್ಥಿಕ ದಿವಾಳಿತನದಿಂದ ಪಾರಾಗಲು ಭಾರತದ ಜಪ ಮಾಡುತ್ತಿದೆ. ತಪ್ಪಿನ ಅರಿವಾಗಿದೆ. ಭಾರತದ ಜೊತೆ ಮಾತುಕತೆ ಆಹ್ವಾನ ನೀಡಿದೆ. ಯುದ್ಧದಿಂದ ಪಾಠ ಕಲಿತಿದ್ದೀವಿ.. ನಮಗೆ ಶಾಂತಿ ಬೇಕು ಎನ್ನುತ್ತಿರುವ ಪಾಕಿಸ್ತಾನಕ್ಕೆ ಬೇಕಿರೋದು ಶಾಂತಿ ಅಲ್ಲ. ಪಾಕಿಸ್ತಾನದ ಮಾತುಕತೆ ಆಹ್ವಾನದ ಹಿಂದಿರುವ ಲೆಕ್ಕಾಚಾರವೇನು? ಇಲ್ಲಿದೆ ಸುವರ್ಣ ಫೋಕಸ್.